Displaying items by tag: ಗರ್ಭಾವಸ್ಥೆ

35 ವಯಸ್ಸಿನ ನಂತರ ಗರ್ಭಧರಿಸುವುದು ಅಪಾಯಕಾರಿ ಎಂದು ನಿಮ್ಮ ಸುತ್ತಲಿನ ಜನರಿಂದ ನಿಮಗೆ ಸಾಕಷ್ಟು ಬಾರಿ ಸಲಹೆ ಮತ್ತು ಎಚ್ಚರಿಕೆ ಸಿಕ್ಕಿರಬಹುದು. 35 ಅಥವಾ 35 ರ ನಂತರ ಗರ್ಭಿಣಿಯಾಗುವ ಆಯ್ಕೆ ಉದ್ದೇಶಪೂರ್ವಕವಾಗಿ ಇರದೇ ಇರಬಹುದು: ಸಮಯಕ್ಕೆ ಸರಿಯಾಗಿ ನಿಮ್ಮ ಜತೆಗಾರ ಸಿಗದೇ ಇರಬಹುದು; ನಿಮ್ಮ ವೃತ್ತಿಜೀವನ ಅಡ್ಡವಾಗಿರಬಹುದು; ನೀವು ಆರಂಭದಲ್ಲಿ ಮಗು ಬೇಡ ಎಂದು ತೀರ್ಮಾನಿಸಿದ್ದಿರಬಹುದು; ನೀವು ತಾಯಿಯಾಗಲು ತೊಂದರೆಗಳನ್ನು ಹೊಂದಿರಬಹುದು.

ಗೊಂದಲ ಮತ್ತು ವಿಲಕ್ಷಣವಾದ ಕನಸುಗಳು ಯಾರಿಗಾದರೂ ಸರಿ ಸ್ವಲ್ಪ ಭಯವನ್ನು ಉಂಟುಮಾಡುತ್ತವೆ. ಗರ್ಭಾವಸ್ಥೆ ನಿಮಗೆ ಹೆಚ್ಚು ತೀವ್ರ ಮತ್ತು ವಿಚಿತ್ರ ಕನಸುಗಳನ್ನು ತರುತ್ತದೆ.

 

ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಗರ್ಭಿಣಿಯಾಗದವರಿಗಿಂತ ತೀವ್ರ ಮತ್ತು ಗೊಂದಲದ ಕನಸುಗಳನ್ನು ಕಾಣುತ್ತಾರೆ ಎಂದು ಅಧ್ಯಯನಗಳನ್ನು ಕಂಡುಕೊಂಡಿವೆ. ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದಲ್ಲಿ ಮಹಿಳೆಯರು ಹಿಂದಿನ ಹಂತಗಳಿಗಿಂತ ಹೆಚ್ಚು ಭ್ರಮೆಭರಿತ ಕನಸುಗಳನ್ನು ಅನುಭವಿಸುತ್ತಾರೆ.

ವಿಟಮಿನ್ D ನಿಮಗೆ ಆರೋಗ್ಯಯುತ ಮೂಳೆಗಳನ್ನು ನೀಡುವದಲ್ಲದೆ ವಿವಿಧ ರೀತಿಯ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ದಿಂದ ಉಂಟಾಗುವ ಮರಣಗಳನ್ನು ಕಡಿಮೆಗೊಳಿಸಬಹುದು, ವಿಶೇಷವಾಗಿ ಕಡಿಮೆ ಬಾಡಿ ಮಾಸ್ ಇಂಡೆಕ್ಸ್ (BMI) ಹೊಂದಿರುವ ಮಹಿಳೆಯರಲ್ಲಿ ಎಂದು ಒಂದು ಅಧ್ಯಯನ ತಿಳಿಸಿದೆ. ಉತ್ತರ ಅಮೆರಿಕಾದ ಮೆನೋಪಾಸ್ ಸೊಸೈಟಿಯ (NAMS) ಜರ್ನಲ್ ಮೆನೊಪಾಸ್ ನಲ್ಲಿ ಸೆಪ್ಟೆಂಬರ್ 19, 2018 ರಂದು ಈ ಅಧ್ಯಯನವನ್ನು ಪ್ರಕಟಿಸಲಾಯಿತು.

ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್ ಗಳು ಎಂದರೇನು?

ಹೊಟ್ಟೆಯ ಮೇಲೆ ಸ್ಟ್ರೆಚ್ ಮಾರ್ಕ್ ಗಳು ಗುಲಾಬಿ ಅಥವಾ ಕೆಲವೊಮ್ಮೆ ಕೆನ್ನೇರಳೆ ಬಣ್ಣದಾಗಿದ್ದು, ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಅವಕಾಶ ಕಲ್ಪಿಸಲು ಗರ್ಭಾಶಯದ ಕೊನೆಯ ಹಂತಗಳಲ್ಲಿ ಹೊಟ್ಟೆಯ ಶೀಘ್ರ ವಿಸ್ತರಣೆ ಆಗುವದರಿಂದ ಕಾಣಿಸಿಕೊಳ್ಳುತ್ತದೆ. ಸ್ಟ್ರೆಚ್ ಮಾರ್ಕ್ಸ್ ನಿಮ್ಮ ತೊಡೆಗಳು, ಪೃಷ್ಠಗಳು, ತೊಡೆಗಳು, ಸೊಂಟ ಮತ್ತು ಸ್ತನಗಳ ಮೇಲೆ ಕಾಣಿಸಿಕೊಳ್ಳಬಹುದು.

ಗರ್ಭಾವಸ್ಥೆಯಲ್ಲಿ ಗರ್ಭಿಣಿ ಮಹಿಳೆಯರು ನಿರಂತರವಾಗಿ ತಪ್ಪು ಮತ್ತು ಸರಿಯ ನಡುವೆ ಇರುವ ವ್ಯತ್ಯಾಸವನ್ನು ಅರಿತುಕೊಳ್ಳಲು ಯಾವಾಗಲು ಹೆದರುತ್ತಾರೆ. ಗರ್ಭಾವಸ್ಥೆಯಲ್ಲಿ ಪ್ರಯಾಣಿಸುವುದು ಸುರಕ್ಷಿತವೇ? ತಾವು ತಿನ್ನುವ ಆಹಾರದಿಂದ ಹೊಟ್ಟೆಯಲ್ಲಿನ ಮಗುವಿಗೆ ಯಾವುದಾದರೂ ಸಮಸ್ಯೆ ಉಂಟಾಗುತ್ತದಯೇ? ಈ ನೂರಾರು ಒಗಟುಗಳ ಮಧ್ಯೆ ಗರ್ಭಿಣಿ ಮಹಿಳೆಯರಿಗೆ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವದೋ ಅಥವಾ ಬೇಡವೋ ಎಂಬುದರ ಬಗೆಗೆ ಕೂಡ ಚಿಂತೆ ಇದೆ. ಗರ್ಭಾವಸ್ಥೆಯಲ್ಲಿ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗುವದರಿಂದ ಮಗುವಿಗೆ ಯಾವುದೇ ರೀತಿಯ ಹಾನಿ ಉಂಟಾಗುವದೇ?

ಅನೇಕವೇಳೆ, ವೈದ್ಯರು ನಿಮಗೆ ರಾತ್ರಿಯಲ್ಲಿ ನಿಮ್ಮ ಎಡಭಾಗದಲ್ಲಿ ಒರಗಿ ನಿದ್ರೆ ಮಾಡಲು ಹೇಳುತ್ತಾರೆ. ಆದರೆ, ಏಕೆ?

 

ವೈದ್ಯರು ಹೀಗೆ ಹೇಳಲು ಒಂದು ವೈದ್ಯಕೀಯ ಕಾರಣವಿದೆ. ಅದಕ್ಕೂ ಮುಂಚೆ ನಿಮಗೆ ಇದು ತಿಳಿದಿರಲಿ; ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿ ಹಗ್ಗ-ಜಗ್ಗಾಟದ ಹಾಗೆ ಒಂದು ಅದ್ಭುತ ವಿದ್ಯಮಾನ ನಡೆದಿರುತ್ತದೆ.

ಪ್ರಿಯಾ ಅವರ 29 ನೇ ವಾರದಲ್ಲಿ. ಎಲ್ಲವೂ ಈಗಲೂ ಸಾಧಾರಣವಾಗಿ ಇರುವಂತೆ ತೋರುತ್ತಿತ್ತು. ಆದರೆ ಇಂದು ಬೆಳಿಗ್ಗೆ ಅವಳಲ್ಲಿ ರಕ್ತಸ್ರಾವ ಮತ್ತು ಕಿಬ್ಬೊಟ್ಟೆಯ ನೋವು ಹಠಾತ್ ಆಕ್ರಮಣ ಆರಂಭವಾಯಿತು. ನೋವು ಅಷ್ಟೊಂದು ವಿಪರೀತವಾಗಿರಲಿಲ್ಲ ಆದರೆ ಖಂಡಿತವಾಗಿಯೂ ಅನಾನುಕೂಲವಾಗಿದೆ. ರಕ್ತಸ್ರಾವವು ಸೌಮ್ಯವಾಗಿತ್ತು, ಆದರೆ ಗಾಢವಾದ ಕೆಂಪು ಬಣ್ಣವನ್ನು ಹೊಂದಿತ್ತು. ಪ್ರಿಯಾ ತುಂಬಾ ಆತಂಕಗೊಂಡಿದ್ದಳು ಮತ್ತು ಮಗುವಿನ ಕೆಲವೇ ಚಲನೆಗಳನ್ನು ಅನುಭವಿಸುತ್ತಿದ್ದಳು. ಅವಳ ಪತಿ ತನ್ನನ್ನು ವೈದ್ಯರ ಹತ್ತಿರ ಕರೆತಂದರು. ವೈದ್ಯರು ಅವಳನ್ನು ಪರೀಕ್ಷಿಸಿ ಅಲ್ಟ್ರಾಸೌಂಡ್ಗೆ ಆದೇಶಿಸಿದರು. ಅಲ್ಟ್ರಾಸೌಂಡ್ ನಿಂದ ಜರಾಯು ದೌರ್ಬಲ್ಯ (Abruptio placenta) ಎಂದು ತಿಳಿಯಬಂತು.

ಭಾರತದಲ್ಲಿನ ಹೆಚ್ಚಿನ ಖಾಸಗಿ ಮತ್ತು ಸಾರ್ವಜನಿಕ ಕಂಪೆನಿಗಳು ಆರೋಗ್ಯ ವಿಮೆಯನ್ನು ಒದಗಿಸುತ್ತವೆ ಅದರಲ್ಲಿ ಮಾತೃತ್ವ ಮತ್ತು ಗರ್ಭಾವಸ್ಥೆಯು ಒಳಗೊಂಡಿದೆ. ಈ ವಿಮೆಗಳನ್ನು ಪ್ರಮುಖ ಆರೋಗ್ಯ ವಿಮಾ ಕಂಪನಿಗಳ ಮೂಲಕ ನೀಡಲಾಗುತ್ತದೆ. ನಮ್ಮ ಮುಂದಿನ ಲೇಖನದಲ್ಲಿ ನಾವು ವಿವಿಧ ವಿಮೆಗಳ ಯೋಜನೆಗಳನ್ನು ಹೋಲಿಸಿ ನಿಮಗೆ ಯಾವುದು ಸೂಕ್ತ ಎಂದು ತಿಳಿಸಲು ಪ್ರಯತ್ನಿಸುತ್ತೇವೆ.

ಗರ್ಭಾವಸ್ಥೆಯಲ್ಲಿ ಮಹಿಳೆಯರು ಮೀನಿನ-ಎಣ್ಣೆ-ಪೂರಕಗಳನ್ನು ಸೇವಿಸುವದರಿಂದ ತಮ್ಮ ಮಕ್ಕಳ ಬಾಲ್ಯದ ಆರಂಭದಲ್ಲಿ ಮೂಳೆ ಮತ್ತು ಮಾಂಸಖಂಡಗಳ ಆರೋಗ್ಯಕರ ಬೆಳವಣಿಗೆಯಾಗುವುದು ಎಂದು ಒಂದು ಡ್ಯಾನಿಷ್ ಸಂಶೋಧನೆ ಬಹಿರಂಗ ಪಡಿಸಿದೆ.

ಮೊದಲ ಬಾರಿಗೆ ತಾಯಿಯಾಗುವುದು ಪ್ರತಿ ಮಹಿಳೆಯ ಜೀವನದ ಅತ್ಯಂತ ರೋಮಾಂಚಕ ಕ್ಷಣವಾಗಿದೆ. ಮೊದಲ ಬಾರಿ ತಾಯಿ ಅಥವಾ ಮೊದಲ ಬಾರಿಗೆ ಪೋಷಕರು ಹೆಚ್ಚಿನ ಸಮಯ ಆತಂಕಕ್ಕೊಳಗಾಗಿರುತ್ತಾರೆ ಮತ್ತು ವಿವಿಧ 'ಮಾಡಬೇಕಾದ ಮತ್ತು ಮಾಡದಿರುವಿಕೆಗಳ' ಕುರಿತು ನಿರಂತರ ಪ್ರಶ್ನೆಗಳನ್ನು ಹೊಂದಿರುತ್ತಾರೆ. ಈ ಬ್ಲಾಗ್ ನಲ್ಲಿ, ನಿಮ್ಮ ಗರ್ಭಾವಸ್ಥೆಯ ಕೆಲವು ಅತ್ಯಾಕರ್ಷಕ ಮೈಲಿಗಲ್ಲುಗಳನ್ನು ನಾನು ತಿಳಿಸಲು ಬಯಸುತ್ತೇನೆ.

Page 1 of 2