ಗರ್ಭಾವಸ್ಥೆಯಲ್ಲಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಗರ್ಭಾವಸ್ಥೆಯ ಸಮಸ್ಯೆಗಳ ಅಪಾಯಗಳು ಉಂಟಾಗಬಹುದು ಮತ್ತು ಮಕ್ಕಳಲ್ಲಿ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಒಂದು ಅಧ್ಯಯನವು ಎಚ್ಚರಿಸಿದೆ.
35 ವಯಸ್ಸಿನ ನಂತರ ಗರ್ಭಧರಿಸುವುದು ಅಪಾಯಕಾರಿ ಎಂದು ನಿಮ್ಮ ಸುತ್ತಲಿನ ಜನರಿಂದ ನಿಮಗೆ ಸಾಕಷ್ಟು ಬಾರಿ ಸಲಹೆ ಮತ್ತು ಎಚ್ಚರಿಕೆ ಸಿಕ್ಕಿರಬಹುದು. 35 ಅಥವಾ 35 ರ ನಂತರ ಗರ್ಭಿಣಿಯಾಗುವ ಆಯ್ಕೆ ಉದ್ದೇಶಪೂರ್ವಕವಾಗಿ ಇರದೇ ಇರಬಹುದು: ಸಮಯಕ್ಕೆ ಸರಿಯಾಗಿ ನಿಮ್ಮ ಜತೆಗಾರ ಸಿಗದೇ ಇರಬಹುದು; ನಿಮ್ಮ ವೃತ್ತಿಜೀವನ ಅಡ್ಡವಾಗಿರಬಹುದು; ನೀವು ಆರಂಭದಲ್ಲಿ ಮಗು ಬೇಡ ಎಂದು ತೀರ್ಮಾನಿಸಿದ್ದಿರಬಹುದು; ನೀವು ತಾಯಿಯಾಗಲು ತೊಂದರೆಗಳನ್ನು ಹೊಂದಿರಬಹುದು.
ಹೊಸ ಸಂಶೋಧನೆಯು "ಗರ್ಭಿಣಿ ಮಹಿಳೆಯರು ಹೊಟ್ಟೆಯಲ್ಲಿರುವ ತನ್ನ ಮಗು ಮತ್ತು ತನಗಾಗಿ ತಿನ್ನಬೇಕು" ಎಂಬ ಎಲ್ಲ ಹೇಳಿಕೆಗಳು ವಾಸ್ತವಿಕವಾಗಿ ಸುಳ್ಳು ಮತ್ತು ಮಗುವಿಗೆ ಮತ್ತು ತಾಯಿಗೆ ಇದರಿಂದ ಆಗುವ ಆರೋಗ್ಯದ ಅಪಾಯದ ಕುರಿತು ಎಚ್ಚರಿಸಿದೆ.
ಗರ್ಭಾವಸ್ಥೆಯಲ್ಲಿ ''ಇಬ್ಬರಿಗೋಸ್ಕರ ತಿನ್ನುವುದು" ಮತ್ತು ಇದರಿಂದ ಸಾಕಷ್ಟು ತೂಕ ಪಡೆಯುವುದು ಅವರ ಮಗುವಿನ ಮೇಲೆ ಅನಪೇಕ್ಷಿತ ಪರಿಣಾಮ ಬೀರುತ್ತದೆ.
ಅನೇಕವೇಳೆ, ವೈದ್ಯರು ನಿಮಗೆ ರಾತ್ರಿಯಲ್ಲಿ ನಿಮ್ಮ ಎಡಭಾಗದಲ್ಲಿ ಒರಗಿ ನಿದ್ರೆ ಮಾಡಲು ಹೇಳುತ್ತಾರೆ. ಆದರೆ, ಏಕೆ?
ವೈದ್ಯರು ಹೀಗೆ ಹೇಳಲು ಒಂದು ವೈದ್ಯಕೀಯ ಕಾರಣವಿದೆ. ಅದಕ್ಕೂ ಮುಂಚೆ ನಿಮಗೆ ಇದು ತಿಳಿದಿರಲಿ; ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿ ಹಗ್ಗ-ಜಗ್ಗಾಟದ ಹಾಗೆ ಒಂದು ಅದ್ಭುತ ವಿದ್ಯಮಾನ ನಡೆದಿರುತ್ತದೆ.
ಹೊರಗಡೆ ತುಂಬಾ ಚಳಿ ಇದೆ ಮತ್ತು ನೀವು ನಿಮ್ಮ ಕೊನೆಯ ತ್ರೈಮಾಸಿಕದಲ್ಲಿದ್ದೀರಿ. ಚಳಿಗಾಲದಲ್ಲಿ ಪೂರ್ಣ-ಸಮಯ ಗರ್ಭವತಿ ಆಗಿರುವ ಕಾರಣದಿಂದಾಗಿ ಕೆಲವು ಅಪಾಯಗಳು ಸಂಭವಿಸಬಹುದು ಮತ್ತು ನೀವು ಕೆಲವು ಮುನ್ನೆಚ್ಚರಿಕೆಗಳು ಮತ್ತು ಹೆಚ್ಚುವರಿ ಕಾಳಜಿಯನ್ನು ತೆಗೆದುಕೊಳ್ಳಬೇಕಾಗಬಹುದು. ಹೊರಗಡೆ ವಾತಾವರಣ ತುಂಬಾ ತಂಪಾಗಿರುವದರಿಂದ ನೀವು ನಿಮ್ಮನ್ನು ಬೆಚ್ಚಗಿಟ್ಟುಕೊಳ್ಳುವುದು ತುಂಬಾ ಅವಶ್ಯಕ. ಗರ್ಭಿಣಿ ಮಹಿಳೆಯರ ಪ್ರತಿರಕ್ಷಣೆ ಶಕ್ತಿ ಸಾಮಾನ್ಯವಾಗಿ ಕಡಿಮೆ ಇರುತ್ತದೆ, ಹೀಗಾಗಿ ಅವರು ಸೋಂಕುಗಳಿಗೆ ಹೆಚ್ಚು ಒಳಗಾಗುತ್ತಾರೆ.
ಮೊದಲ ಬಾರಿಗೆ ತಾಯಿಯಾಗುವುದು ಪ್ರತಿ ಮಹಿಳೆಯ ಜೀವನದ ಅತ್ಯಂತ ರೋಮಾಂಚಕ ಕ್ಷಣವಾಗಿದೆ. ಮೊದಲ ಬಾರಿ ತಾಯಿ ಅಥವಾ ಮೊದಲ ಬಾರಿಗೆ ಪೋಷಕರು ಹೆಚ್ಚಿನ ಸಮಯ ಆತಂಕಕ್ಕೊಳಗಾಗಿರುತ್ತಾರೆ ಮತ್ತು ವಿವಿಧ 'ಮಾಡಬೇಕಾದ ಮತ್ತು ಮಾಡದಿರುವಿಕೆಗಳ' ಕುರಿತು ನಿರಂತರ ಪ್ರಶ್ನೆಗಳನ್ನು ಹೊಂದಿರುತ್ತಾರೆ. ಈ ಬ್ಲಾಗ್ ನಲ್ಲಿ, ನಿಮ್ಮ ಗರ್ಭಾವಸ್ಥೆಯ ಕೆಲವು ಅತ್ಯಾಕರ್ಷಕ ಮೈಲಿಗಲ್ಲುಗಳನ್ನು ನಾನು ತಿಳಿಸಲು ಬಯಸುತ್ತೇನೆ.
ನಿದ್ರೆ ಮಾಡುವಾಗ ನಿಮ್ಮ ದೊಡ್ಡ ಹೊಟ್ಟೆಯೊಂದಿಗೆ ನೀವು ಅನುಭವಿಸಬಹುದಾದ ಅಸ್ವಸ್ಥತೆಯು ನಿದ್ದೆಯಿಲ್ಲದಂತೆ ಮಾಡಬಹುದು. ಪ್ರೆಗ್ನೆನ್ಸಿ ದಿಂಬುಗಳನ್ನು ಆರಾಮದಾಯಕವಾದ ನಿದ್ರೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಹಿಂಭಾಗ, ಸೊಂಟ ಮತ್ತು ಕೀಲುಗಳಲ್ಲಿ ನೋವನ್ನು ಕಡಿಮೆ ಮಾಡುತ್ತದೆ. ನಿಮ್ಮ ಗರ್ಭಾವಸ್ಥೆಯ ಮೂಲಕ ನೀವು ಪ್ರಗತಿ ಹೊಂದುತ್ತಿರುವಂತೆ ನಿಮ್ಮ ದೇಹದ ಆಕಾರದ ಬದಲಾವಣೆಗಳಿಗೆ ತಕ್ಕಂತೆ ಪ್ರೆಗ್ನೆನ್ಸಿ ದಿಂಬುಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ.
ಪ್ಲಾಸೆಂಟಾ ಪ್ರಿವಿಯಾ ಎಂದರೆ ಜರಾಯು ಅಥವಾ ಮಾಸುಚೀಲ ಮೊದಲು ಎಂದರ್ಥ. ಈ ಸ್ಥಿತಿಯಲ್ಲಿ ಪ್ಲಾಸೆಂಟಾ (ಜರಾಯು) ಗರ್ಭಾಶಯದ ಕೆಳ ಭಾಗದಲ್ಲಿ ಗರ್ಭಕೋಶದ ಮಾರ್ಗದ (ಆಂತರಿಕ OS) ಹತ್ತಿರ ಅಥವಾ ಈ ಮಾರ್ಗವನ್ನು ಪೂರ್ತಿಯಾಗಿ ಮುಚ್ಚಿದಂತೆ ನೆಡಲ್ಪಟ್ಟಿರುತ್ತದೆ. ಮತ್ತೆ ಇದು ಗರ್ಭಾವಸ್ಥೆಯ 20 ವಾರಗಳ ನಂತರ ಸಾಮಾನ್ಯವಾಗಿ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಸಾಮಾನ್ಯವಾಗಿ, ಪ್ಲಾಸೆಂಟಾ ಗರ್ಭಾಶಯದ ಮೇಲೆ ಸ್ಥಾಪಿತವಾಗಿರುತ್ತದೆ.
ಕೆಲವು ಮಹಿಳೆಯರಿಗೆ ಗರ್ಭಧಾರಣೆಯ ಮೊದಲ ಕೆಲವು ವಾರಗಳಲ್ಲಿ ರಕ್ತಸ್ರಾವವಾಗಬಹುದು. ಈ ಸಮಯದಲ್ಲಿ ಅವರಿಗೆ ವಿಶ್ರಾಂತಿಸಲು ಹೇಳಲಾಗುತ್ತದೆ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್ ನ ಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಹಾಗಿದ್ರೆ ಪ್ರೊಜೆಸ್ಟ್ರೊನ್ ಅಂದರೆ ಏನೆಂದು ನಾವು ತಿಳಿದುಕೊಳ್ಳೋಣ ಬನ್ನಿ.
ಹೃದಯಕ್ಕೆ ಪೂರ್ವಸೂಚಕವು ಭ್ರೂಣದಲ್ಲಿ 4 ವಾರಗಳಿಂದ ರೂಪಗೊಳ್ಳಲು ಆರಂಭವಾಗುತ್ತದೆಯಾದರೂ. ಇದು ನಿಮಗೆ ಇನ್ನೂ ಕೇಳಿಸದೇ ಇರಬಹುದು. ಇದು ಇನ್ನೂ ಒಂದು ಕೊಳವೆ ರೂಪದಲ್ಲಿದೆ. ಗರ್ಭಾವಸ್ಥೆಯ ಆರನೆಯ ವಾರದಲ್ಲಿ, ಈ ಟ್ಯೂಬ್ ತಿರುಗಿ ತಿರುಗಿ 4 ಕೋಣೆಗಳೊಂದಿಗೆ ಹೃದಯದಲ್ಲಿ ಆಕಾರವನ್ನು ಹೊಂದುತ್ತದೆ ಮತ್ತು ಪ್ರತಿ ನಿಮಿಷಕ್ಕೆ 110 ರಿಂದ 120 ಬಾರಿ ಬಡಿದುಕೊಳ್ಳುತ್ತಿದೆ. ಇನ್ನೊಂದು ಎರಡು ವಾರಗಳಿಂದ 8 ವಾರಗಳವರೆಗೆ, ಭ್ರೂಣದ ಹೃದಯ ಬಡಿತ ಪ್ರತಿ ನಿಮಿಷಕ್ಕೆ 150 -170 ಬಡಿತಗಳವರೆಗೆ ಹೆಚ್ಚುತ್ತದೆ.