ಪ್ರಸಕ್ತ ಇಪಿಎ ನ (Environmental Protection Agency) ಮಾನದಂಡ ಮಟ್ಟಗಳು ಭ್ರೂಣಕ್ಕೆ ರಕ್ಷಣೆ ನೀಡುವಷ್ಟು ಕಟ್ಟುನಿಟ್ಟಾಗಿಲ್ಲ, ಇಪಿಎ ನ ಈ ಮಟ್ಟಗಳು ಪರಿಸರದ ಅಂಶಗಳಿಗೆ ವಿಶೇಷವಾಗಿ ಸೂಕ್ಷ್ಮಗ್ರಾಹಿಯಾಗಿರಬಹುದು ಎಂದು ಅಧ್ಯಯನದಲ್ಲಿ ಈ ಬಗ್ಗೆ ಕಾಳಜಿ ವ್ಯಕ್ತಪಡಿಸಲಾಗಿದೆ. ಈ ಅಧ್ಯಯನವು (ಇಪಿಎ) ಮಾನದಂಡಗಳಿಗೆ ಕೆಳಗಿರುವ ಕಲುಷಿತ ಗಾಳಿಯ ಮಟ್ಟಗಳಿಗೆ ಒಡ್ಡಿಕೊಂಡ ಮಹಿಳೆಯರಲ್ಲಿ ಜೈವಿಕ ಪರಿಣಾಮಗಳನ್ನು ಕಂಡುಹಿಡಿದಿದೆ.
ವಾಯು ಮಾಲಿನ್ಯಕ್ಕೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಗರ್ಭಾಶಯದ ಉರಿಯೂತದ (intrauterine inflammation) ಅಪಾಯಗಳುಂಟಾಗಬಹುದು (ಇದನ್ನು ಕೊರಿಯೋಆಮ್ನಿಯೋನಿಟೀಸ್ ಎಂದು ಕೂಡ ಕರೆಯುತ್ತಾರೆ, ಇದು ಬ್ಯಾಕ್ಟೀರಿಯಾದ ಸೋಂಕಿನಿಂದ ಭ್ರೂಣದ ಪೊರೆಗಳ (ಆಮ್ನಿಯನ್ ಮತ್ತು ಕೊರಿಯನ್) ಉರಿಯೂತವಾಗಿದೆ). ಅಕಾಲಿಕ ಜನನದ ಕಾರಣದಿಂದ ಮಗುವಿನಲ್ಲಿ ಭ್ರೂಣದ ಸಮಯದಿಂದ ಬಾಲ್ಯದ ಸಮಯದವರೆಗೆ ಆರೋಗ್ಯದ ಸಮಸ್ಯೆಗಳನ್ನು ವೃದ್ಧಿಸುತ್ತದೆ.
ಆದಾಗ್ಯೂ, ಅಧ್ಯಯನವು ಕಾರಣ ಮತ್ತು ಪರಿಣಾಮದ ಸಂಬಂಧವನ್ನು ಸಾಬೀತುಪಡಿಸುವುದಿಲ್ಲ. ಇದು ವಾಯುಮಾಲಿನ್ಯ ಮತ್ತು ಗರ್ಭಾವಸ್ಥೆಯ ತೊಡಕುಗಳಿಗೆ ಒಡ್ಡಿಕೊಳ್ಳುವ ನಡುವಿನ ಸಂಬಂಧವನ್ನು ಮಾತ್ರ ತೋರಿಸುತ್ತದೆ.
ಈ ಅಧ್ಯಯನದಲ್ಲಿ 5,000 ಕಡಿಮೆ-ಆದಾಯದ ತಾಯಿ-ಮಕ್ಕಳ ಜೋಡಿಗಳು ಸೇರಿದ್ದವು. ಸುಮಾರು 2/3 ಭಾಗದಷ್ಟು ಮಹಿಳೆಯರನ್ನು ಇಪಿಎ ಪ್ರಮಾಣಿತ/ಸುರಕ್ಷಿತ ಮಟ್ಟಕ್ಕಿಂತ ಕಡಿಮೆ ಇದ್ದ ವಾಯುಮಾಲಿನ್ಯಕ್ಕೆ ಒಳಪಡಿಸಲಾಯಿತು ಮತ್ತು 1/3 ರಷ್ಟು ಮಹಿಳೆಯರನ್ನು ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಿನ ವಾಯುಮಾಲಿನ್ಯಕ್ಕೆ ಒಳಪಡಿಸಲಾಯಿತು.
ಇಪಿಎ ಮಾನದಂಡಗಳ ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಿನ ವಾಯುಮಾಲಿನ್ಯಕ್ಕೆ ಒಡ್ಡಿಕೊಂಡ ಮಹಿಳೆಯರಲ್ಲಿ ಗರ್ಭಾಶಯದ ಉರಿಯೂತದ ಅಪಾಯಗಳು ದುಪ್ಪಟ್ಟು ಆಗಿರುವುದನ್ನು ಈ ಅಧ್ಯಯನವು ಬಹಿರಂಗಪಡಿಸಿದವು. ಮೊದಲ ತ್ರೈಮಾಸಿಕ ಅವಧಿಯಲ್ಲಿ ಈ ಅಪಾಯಗಳಿಗೆ ಹೆಚ್ಚು ಸೂಕ್ಷ್ಮತೆಯನ್ನು ತೋರುತ್ತದೆ.
ಪ್ರಸವದ ನಂತರ ಹೊರಬರುವ ಜರಾಯು ಗರ್ಭಾವಸ್ಥೆಯ ಮೇಲೆ ವಾಯುಮಾಲಿನ್ಯದ ಪರಿಣಾಮಗಳ ಬಗ್ಗೆ ಪ್ರಮುಖವಾದ ಸುಳಿವುಗಳನ್ನು ನೀಡುತ್ತದೆ ಮತ್ತು ಇತರ ಪ್ರಮುಖ ಆರೋಗ್ಯ ಮಾಹಿತಿಯನ್ನು ಒದಗಿಸಬಹುದು ಎಂದು ಸಂಶೋಧಕರು ಭರವಸೆ ಹೊಂದಿದ್ದಾರೆ.