Friday, 12 October 2018 05:30

ವಿಟಮಿನ್ D ಕೊರತೆ ಮತ್ತು ಸ್ತನ ಕ್ಯಾನ್ಸರ್

Written by

ವಿಟಮಿನ್ D ನಿಮಗೆ ಆರೋಗ್ಯಯುತ ಮೂಳೆಗಳನ್ನು ನೀಡುವದಲ್ಲದೆ ವಿವಿಧ ರೀತಿಯ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ದಿಂದ ಉಂಟಾಗುವ ಮರಣಗಳನ್ನು ಕಡಿಮೆಗೊಳಿಸಬಹುದು, ವಿಶೇಷವಾಗಿ ಕಡಿಮೆ ಬಾಡಿ ಮಾಸ್ ಇಂಡೆಕ್ಸ್ (BMI) ಹೊಂದಿರುವ ಮಹಿಳೆಯರಲ್ಲಿ ಎಂದು ಒಂದು ಅಧ್ಯಯನ ತಿಳಿಸಿದೆ. ಉತ್ತರ ಅಮೆರಿಕಾದ ಮೆನೋಪಾಸ್ ಸೊಸೈಟಿಯ (NAMS) ಜರ್ನಲ್ ಮೆನೊಪಾಸ್ ನಲ್ಲಿ ಸೆಪ್ಟೆಂಬರ್ 19, 2018 ರಂದು ಈ ಅಧ್ಯಯನವನ್ನು ಪ್ರಕಟಿಸಲಾಯಿತು.

ಮಹಿಳೆಯರ ಸಾವಿನ ಕಾರಣಗಳಲ್ಲಿ ಪ್ರಮುಖವಾಗಿರುವ ಸ್ತನ ಕ್ಯಾನ್ಸರ್, ಪ್ರಪಂಚದಾದ್ಯಂತದ ಮಹಿಳೆಯರಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಕೂಡ ಆಗಿದೆ. ಸ್ತನ ಕ್ಯಾನ್ಸರ್ ಪ್ರೌಢಾವಸ್ಥೆಯ ಪ್ರಾರಂಭ, ತಡವಾದ ಋತುಬಂಧ, ಮೊದಲ ಗರ್ಭಧಾರಣೆಯಲ್ಲಿ ತಡ, ಒಮ್ಮೆ ಕೂಡ ಗರ್ಭ ಧರಿಸದೇ ಇರುವುದು, ಸ್ಥೂಲಕಾಯತೆ ಮತ್ತು ಕುಟುಂಬ ಇತಿಹಾಸದಂತಹ ಸಂತಾನೋತ್ಪತ್ತಿ ಅಪಾಯದ ಅಂಶಗಳೊಂದಿಗೆ ಸಂಬಂಧಿಸದೆ. ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವದರಲ್ಲಿ ವಿಟಮಿನ್ D ನ ಪಾತ್ರ ಇನ್ನೂ ಚರ್ಚೆಯಲ್ಲಿದೆ.

600 ಬ್ರೆಜಿಲಿಯನ್ ಮಹಿಳೆಯರ ಅಧ್ಯಯನವು ಜೀವಕೋಶದ ಪ್ರಸರಣವನ್ನು ತಡೆಯುವ ಮೂಲಕ ಕ್ಯಾನ್ಸರ್ ಅಪಾಯವನ್ನು ವಿಟಮಿನ್ D ಕಡಿಮೆಗೊಳಿಸುತ್ತದೆ ಎಂದು ಸೂಚಿಸುತ್ತದೆ.

ಋತುಬಂಧ ಮತ್ತು ಕ್ಯಾನ್ಸರ್ ಇರುವ ಮಹಿಳೆಯರ ರೋಗ ನಿರ್ಣಯದಲ್ಲಿ ವಿಟಮಿನ್ D ಕೊರತೆಯ ಜೊತೆ ಹೆಚ್ಚಿನ ಪ್ರಮಾಣದ ಸ್ಥೂಲಕಾಯತೆ ಕಂಡುಬಂದಿತು. ಈ ಅಧ್ಯಯನ ಕ್ಯಾನ್ಸರ್ ಇಲ್ಲದೆ ಇರುವ ಋತುಬಂಧ ಆಗಿರುವ ಮಹಿಳೆಯರನ್ನು ಕೂಡ ಹೊಂದಿತ್ತು. ಈ ಮುಂಚೆಯ ಅಧ್ಯಯನಗಳು ಸಹ ವಿಟಮಿನ್ D ಮತ್ತು ಸ್ತನ ಕ್ಯಾನ್ಸರ್ ಮರಣದ ನಡುವಿನ ಸಂಬಂಧವನ್ನು ತೋರಿಸಿವೆ. ಅತ್ಯಂತ ಹೆಚ್ಚು ವಿಟಮಿನ್ ಡಿ ಸಾಂದ್ರತೆ ಹೊಂದಿದ ಗುಂಪಿನ ಮಹಿಳೆಯರಲ್ಲಿ, ವಾಸ್ತವವಾಗಿ, ಕಡಿಮೆ ವಿಟಮಿನ್ D ಸಾಂದ್ರತೆ ಹೊಂದಿದ ಗುಂಪಿನ ಮಹಿಳೆಯರ ಗುಂಪಿಗಿಂತ 50 ಪ್ರತಿಶತಕ್ಕಿಂತ ಕಡಿಮೆ ಮರಣ ಪ್ರಮಾಣ ಹೊಂದಿತ್ತು ಹಾಗಾಗಿ ಸ್ತನ ಕ್ಯಾನ್ಸರ್ ಹೊಂದಿರುವ ಮಹಿಳೆಯರಲ್ಲಿ ವಿಟಮಿನ್ D ಮಟ್ಟಗಳು ಸಾಮಾನ್ಯ ವ್ಯಾಪ್ತಿಯಲ್ಲಿ ಪುನಃಸ್ಥಾಪಿಸಬೇಕೆಂದು ಈ ಅಧ್ಯಯನ ಸೂಚಿಸುತ್ತದೆ.

Last modified on Friday, 12 October 2018 05:42
Dr Padma

Dr Padma is a Family care physician and is the Founder and CEO of MedHealthTV.

www.medhealthtv.com

Leave a comment

Make sure you enter all the required information, indicated by an asterisk (*). HTML code is not allowed.