ಸಿಸೇರಿಯನ್ ಶಸ್ತ್ರ ಚಿಕೆತ್ಸೆಯ ಏರಿಕೆಗೆ ಕಾರಣಗಳು:
ಕಳೆದ 15 ವರ್ಷಗಳಲ್ಲಿ ಸಿಸೇರಿಯನ್ ಚಿಕಿತ್ಸೆಯಾ ಸಂಖ್ಯೆ ಶೇ. 12 ರಿಂದ ಶೇ. 21 ಕ್ಕೆ, ಬಹುತೇಕ ದುಪ್ಪಟ್ಟು ಆಗಿದೆ ಎಂದು ದಿ ಲಾನ್ಸೆಟ್ ಪತ್ರಿಕೆಯಲ್ಲಿ ಪ್ರಕಟವಾದ 169 ರಾಷ್ಟ್ರಗಳಲ್ಲಿ ಸಿಸೇರಿಯನ್ ಚಿಕಿತ್ಸೆಯ ಮೇಲೆ ನಡೆಸಿದ ಅಧ್ಯಯನ ತಿಳಿಸಿದೆ.
ಅಧ್ಯಯನದ ಪ್ರಕಾರ ಶೇಕಡಾ 60 ರಷ್ಟು ದೇಶಗಳು ಸಿಸೇರಿಯನ್ ಚಿಕೆತ್ಸೆಯ ಮಿತಿಮೀರಿದ ಬಳಕೆ ಮತ್ತು ಶೇಕಡಾ 25 ರಷ್ಟು ದೇಶಗಳು ಅಲ್ಪ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಯಿತು. ಸಿಸೇರಿಯನ್ ನ ವಿಭಿನ್ನ ಕಾರಣಗಳಲ್ಲಿ ಸಾಮಾಜಿಕ ಸಂಸ್ಕೃತಿಗಳು, ಬಡತನ ಮಟ್ಟಗಳು, ವಿಮಾ ರಕ್ಷಣೆ ಮತ್ತು ಹಿಂದಿನ ಸಿಸೇರಿಯನ್ ನ ಕಾರಣದಿಂದಾಗಿ ಅನಂತರದ ಯೋನಿ-ಪ್ರಸವಕ್ಕೆ ಅಡಚಣೆಗಳು ಸೇರಿವೆ.
ಸಿಸೇರಿಯನ್ ನ ಹೆಚ್ಚಳವು ಉತ್ತರ ಅಮೆರಿಕಾ, ಪಶ್ಚಿಮ ಯುರೋಪ್, ಕೆರಿಬಿಯನ್ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಕಂಡುಬಂದಿತು. ಉದಾಹರಣೆಗೆ, ಲ್ಯಾಟಿನ್ ಅಮೆರಿಕದಲ್ಲಿ c- ಸೆಕ್ಷನ್ ಶಸ್ತ್ರ ಚಿಕೆತ್ಸೆ ಕಳೆದ 15 ವರ್ಷಗಳಲ್ಲಿ 30% ರಷ್ಟು ಹೆಚ್ಚಳವಾಗಿದೆ ಮತ್ತು ಇದಕ್ಕೆ ಕಾರಣ ಯೋನಿ-ಪ್ರಸವಕ್ಕೆ ಸಾಮರ್ಥ್ಯ ಹೊಂದಿದ್ದರೂ ಸಹ ಮಹಿಳೆಯರು ಸಿಸೇರಿಯನ್ ನ್ನು ಆಯ್ಕೆ ಮಾಡಿಕೊಳ್ಳುವುದು ಎಂದು ತಿಳಿದಿದೆ. ಆದರೆ, ಆಫ್ರಿಕಾದ ದೇಶಗಳಲ್ಲಿ ಸಿಸೇರಿಯನ್ ಚಿಕಿತ್ಸೆಯ ವಿಧಾನ ಅಲ್ಪ ಬಳಕೆಯಾಗಿದೆ.
ದಿ ಲಾನ್ಸೆಟ್ ಪತ್ರಿಕೆ, ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಕಡಿಮೆ-ಅಪಾಯದ ಸರ್ಜರಿ ಏನು ಅಲ್ಲ ಮತ್ತು ಚರ್ಮದ ಮೇಲೆ ಶಸ್ತ್ರ ಚಿಕೆತ್ಸೆಯ ಗುರುತುಗಳು, ಸ್ಟಿಲ್-ಬರ್ತ್ (ಗರ್ಭಾಶಯದಲ್ಲೇ ಮರಣ ಹೊಂದಿದ ಮಗುವಿನ ಜನನ), ಪ್ರಸವಪೂರ್ವ ಜನನ ಮತ್ತು ನಂತರದ ಗರ್ಭಧಾರಣೆಗಲ್ಲಿ ತೊಡಕುಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿದೆ.
ಹೆಚ್ಚಿನ ಸಿಸೇರಿಯನ್ ಸಂಖ್ಯೆಗೆ ಕಾರಣಕರ್ತರು:
ಗರ್ಭಿಣಿಯರಲ್ಲಿ ಕೇವಲ 7-10 ಶೇಕಡಾ ಮಾತ್ರ ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಗೆ ಒಳಗಾಗಲು ಗಂಭೀರ ತೊಡಕುಗಳಾಗಬಹುದು ಹಾಗಾಗಿ ಇಲ್ಲಿ ಸಿ-ಸೆಕ್ಷನ್ ಶಿಫಾರಸ್ಸು ಮಾಡುವ ವೈದ್ಯರು ಮತ್ತು ಪ್ರಸೂತಿಶಾಸ್ತ್ರಜ್ಞರ ಪಾತ್ರ ತುಂಬಾ ಮುಖ್ಯವಾಗಿದೆ.
ಹೆಚ್ಚಿನ ಸಂದರ್ಭಗಳಲ್ಲಿ ವೈದ್ಯರು ಯೋನಿ-ಪ್ರಸವವನ್ನು ಪ್ರೋತ್ಸಾಹಿಸುತ್ತಾರೆ ಆದರೆ ಗರ್ಭಕಂಠದ ಉಬ್ಬರವಿಳಿತದಂತಹ ತೊಡಕುಗಳು, ಪ್ರಸವ ಮತ್ತು ಭ್ರೂಣದ ಆರೋಗ್ಯದ ಪ್ರಗತಿ ಮತ್ತು ಇತರ ತುರ್ತುಸ್ಥಿತಿಗಳು ಸಿ-ಸೆಕ್ಷನ್ ಕಾರ್ಯವಿಧಾನವನ್ನು ಆಯ್ಕೆ ಮಾಡಲು ಒತ್ತಡ ಹಾಕಬಹುದು.
ಮಹಿಳೆಯ ಇಚ್ಛೆಗಳು, ಶ್ರೀಮಂತಿಕೆ, ಯೋನಿ ಪ್ರಸವಕ್ಕೆ ಯಾವುದೇ ಬದ್ಧತೆ ಇಲ್ಲದೆ ಇರುವುದು ಮತ್ತು ಇತರ ಗಮನಾರ್ಹ ಅಸಾಮಾನ್ಯ ಗುಣಲಕ್ಷಣಗಳಲ್ಲದೆ, ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಗಳಿಗೆ ವೈದ್ಯರು ದೊಡ್ಡ ನೇರ ಕೊಡುಗೆ ನೀಡುತ್ತಾರೆ, ಎಂದು ಅಧ್ಯಯನ ಸೂಚಿಸಿದೆ.
VBAC: ಸಿಸೇರಿಯನ್ ನಂತರ ಯೋನಿ-ಪ್ರಸವ ಜನನ
ನೀವು VBAC ಯನ್ನು ಆಯ್ಕೆ ಮಾಡಿದರೆ, ನಿಕಟವಾಗಿ ನಿಮ್ಮ ಮೇಲೆ ನಿಗಾ ಇಡಲಾಗುವುದು ಮತ್ತು ನಿಮಗೆ ಅಥವಾ ನಿಮ್ಮ ಮಗುವಿಗೆ ಪ್ರಸವದ ಸಮಯದಲ್ಲಿ ಯಾವುದೇ ತೊಂದರೆ ಉಂಟಾದರೆ, ವೈದ್ಯರು ತುರ್ತುಸ್ಥಿತಿ ಘೋಷಿಸಿ ಸಿಸೇರಿಯನ್ ಚಿಕಿತ್ಸೆ ಮಾಡಲು ನಿರ್ಧರಿಸಬಹುದು.
VBAC ನ ಅಪಾಯಗಳ ಪೈಕಿ ಹಿಂದಿನ ಶಸ್ತ್ರಚಿಕಿತ್ಸೆಯಿಂದ ಉಂಟಾದ ಗಾಯದ ಗುರುತುಗಳು ಯೋನಿ-ಪ್ರಸವದ ಸಮಯದಲ್ಲಿ ಛಿಧ್ರವಾಗಬಹುದು. ಇದು ಅಪರೂಪದ ಸಂಭವ ಆದರೆ ಇದರಿಂದ ತಾಯಿ ಮತ್ತು ಮಗುವಿಗೆ ಗಂಭೀರ ಸಮಸ್ಯೆಗಳಾಗಬಹುದು.
ಸಿಸೇರಿಯನ್ ನಂತರ ಯೋನಿ-ಪ್ರಸವ ಅತಿ ಪರಿಣಾಮಕಾರಿಯಾಗಬಹುದು. ಈ ಮುಂಚೆ ನಿಮಗೆ ಸಿಸೇರಿಯನ್ ಆಗಿದ್ದು ನಿಮ್ಮ ಮೂರನೇ ಅಥವಾ ನಾಲ್ಕನೇ ಗರ್ಭಾವಸ್ಥೆಯಲ್ಲಿ ಯೋನಿ-ಪ್ರಸವಕ್ಕೆ ಪ್ರಯತ್ನಿದರೆ ಇದು ನಿಮ್ಮ ಜೀವಕ್ಕೆ ಅತಿ ಅಪಾಯಕಾರಿವಾಗಬಹುದು.
ಸಿಸೇರಿಯನ್ ನಂತರದ ಗರ್ಭಧಾರಣೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಸ್ಪಷ್ಟವಾಗಿದೆ ಮತ್ತು ಕೆಲವೊಮ್ಮೆ ಕೆಲವು ದಶಕಗಳವರೆಗೆ ಮಹಿಳೆಯರ ಸಂಪೂರ್ಣ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಒಂದು ಬಾರಿ ಸಿಸೇರಿಯನ್ ಆದರೆ ಎರಡನೇ ಅಥವಾ ನಂತರದ ಸಿಸೇರಿಯನ್ ವಿಧಾನವನ್ನು ಪ್ರಯೋಗಿಸಲು ಆಗುವುದಿಲ್ಲ.
ಮಗುವಿನ ಮೇಲೆ ಪರಿಣಾಮಗಳು:
ಸಿ-ಸೆಕ್ಷನ್ ನಲ್ಲಿ ಜನಿಸಿದ ಶಿಶುಗಳು ಉಸಿರಾಟದ ತೊಂದರೆ ಮತ್ತು ಇತರೇ ನರವಿಜ್ಞಾನದ ಆರೋಗ್ಯದ ಅಪಾಯಗಳನ್ನು ಹೊಂದುತ್ತವೆ. ಜನನದ ಸಮಯದಲ್ಲಿ ಉಸಿರಾಟಕ್ಕೆ ಮಗುವಿನ ಶ್ವಾಸಕೋಶವನ್ನು ತಯಾರಿಸಲು ಪ್ರಸವದ ಸಮಯದಲ್ಲಿ ಯೋನಿಯ ಸಂಕೋಚನೆಗಳು ಸಹಾಯ ಮಾಡುತ್ತವೆ.
ಸಿಸೇರಿಯನ್ ಜನನದ ನಂತರ ಮತ್ತು ಆಸ್ತಮಾದ ಬೆಳವಣಿಗೆಗೆ ಸಂಬಂಧಿಸಿದಂತೆ ಕೆಲವು ವರದಿಗಳು ಇವೆ. ಸಿಸೇರಿಯನ್ ನಲ್ಲಿ ಜನಿಸಿದ ಮಕ್ಕಳ ಕರುಳಿನಲ್ಲಿ ಕೆಲವು ರೀತಿಯ ಬ್ಯಾಕ್ಟೀರಿಯಾಗಳನ್ನು ಕಂಡುಕೊಳ್ಳಲಾಗಿದೆ. ಈ ಕರುಳಿನ ಬ್ಯಾಕ್ಟೀರಿಯಾ ಹೊಂದಿರುವ ಮಕ್ಕಳು ನಂತರ ಅಲರ್ಜಿಗಳು ಅಥವಾ ಆಸ್ತಮಾವನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.
ತಾಯಿಯ ಮೇಲೆ ಪರಿಣಾಮಗಳು:
ಸಿಸೇರಿಯನ್ ಶಸ್ತ್ರಚಿಕಿತ್ಸೆಯಿಂದ ನೋವು, ಜ್ವರ, ಔಷಧಿಗಳಿಗೆ ಪ್ರತಿಕ್ರಿಯೆ, ಅಥವಾ ಸೋಂಕುಗಳಂತಹ ತೊಡಕುಗಳು ಪಡೆಯುವುರಿಂದ ಜನನದ ನಂತರ ನಿಮ್ಮ ಮಗುವಿನೊಂದಿಗೆ ಇರಲು ಕಷ್ಟವಾಗಬಹುದು. ನಿಮ್ಮ ಮಗುವನ್ನು ಎತ್ತಿಕೊಳ್ಳುವುದು, ಹಾಲುಣಿಸುವುದು, ಮತ್ತು ಮುದ್ದಾಡುವದು ನಿಮ್ಮ ನಿರೀಕ್ಷೆಗಿಂತ ಹೆಚ್ಚು ಕಷ್ಟ ಮತ್ತು ನೋವುಂಟುಮಾಡಬಹುದು.
ಇದಲ್ಲದೆ, ಸಿಸೇರಿಯನ್ ನಂತರ ತಾಯಿಯ ಮರಣ ತುರ್ತು ಸಂದರ್ಭಗಳಲ್ಲಿ 4 ಬಾರಿ ಮತ್ತು ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡಾಗ 3 ಬಾರಿ ಹೆಚ್ಚಾಗುತ್ತದೆ.
ಸಿಸೇರಿಯನ್ ನಂತರ ಸೋಂಕು ಅತ್ಯಂತ ಸಾಮಾನ್ಯ ತೊಡಕಾಗಿದೆ, ವಿಶೇಷವಾಗಿ ಚಿಕೆತ್ಸೆಗೆ ಎಂದು ಬಳಸಿದ ಕ್ಯಾತಿಟರ್ ಮೂತ್ರಕೋಶದಲ್ಲಿ ಸೋಂಕು ಉಂಟುಮಾಡುತ್ತದೆ.
ಸಿಸೇರಿಯನ್ ನಿಂದ ಚೇತರಿಕೆ ಸಾಮಾನ್ಯ ಯೋನಿ-ಪ್ರಸವಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆಕೆಯ ಪರಿಸ್ಥಿತಿಗೆ ಅನುಗುಣವಾಗಿ ತಾಯಿ 3 ರಿಂದ 4 ದಿನಗಳವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ತೊಡಕುಗಳು, ಸೋಂಕುಗಳು ಮತ್ತು ನೋವುಗಳು ಸಿಸೇರಿಯನ್ ನ ಕೆಲವು ನಕಾರಾತ್ಮಕ ಅಂಶಗಳಾಗಿವೆ.