ಆದ್ದರಿಂದ ಕಬ್ಬಿಣದ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿ. ಕಬ್ಬಿಣಾಂಶ ಮತ್ತು ಫೋಲಿಕ್ ಆಸಿಡ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸದೇ ಇರುವದರಿಂದ ರಕ್ತಹೀನತೆ ಉಂಟಾಗುತ್ತದೆ.
ಐರನ್ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಡಿ...
i) ಖಾಲಿ ಹೊಟ್ಟೆಯ ಮೇಲೆ ಆಹಾರದ ಮೊದಲು ಐರನ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕು, ಆದರೆ ನೀವು ಆ ರೀತಿಯಲ್ಲಿ ಸಹಿಸಲಾರದಿದ್ದರೆ, ಊಟಗಳ ನಡುವೆ ಅಥವಾ ಊಟದ ನಂತರ ಅದನ್ನು ತೆಗೆದುಕೊಳ್ಳಬಹುದು. ಖಾಲಿ ಹೊಟ್ಟೆಯ ಮೇಲೆ ತೆಗೆದುಕೊಂಡರೆ ಅವು ಉತ್ತಮವಾಗಿ ಹೀರಿಕೊಳ್ಳುತ್ತವೆ.
ii) ಕಬ್ಬಿಣಾಂಶ ವಿಟಮಿನ್ C ಇರುವ ಆಹಾರಗಳ - ಆಮ್ಲ ಅಥವಾ ನಿಂಬೆ - ಜೊತೆ ತೆಗೆದುಕೊಂಡಾಗ ದೇಹವು ಅದನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಆದ್ದರಿಂದ ವಿಟಮಿನ್ C ಆಹಾರಗಳನ್ನು ನಿಮ್ಮ ಆಹಾರ ಪದ್ದತಿಯಲ್ಲಿ ಸೇರಿಸಿ (ಪೇರಳೆ ಹಣ್ಣು ಅಥವಾ ಸೀಬೆ ಹಣ್ಣು, ಕಿವಿ ಹಣ್ಣು, ಲಿಚೆ, ಪಪ್ಪಾಯ, ಕಿತ್ತಳೆ ಮತ್ತು ನೆಲ್ಲಿಕಾಯಿ).
iii) ಚಹಾದಲ್ಲಿ ಕಂಡುಬರುವ ಟ್ಯಾನಿನ್ ಉಪಸ್ಥಿತಿ ಕಬ್ಬಿಣಾಂಶದ ಹೀರಿಕೆಯಲ್ಲಿ ವಿಳಂಬ ಮಾಡುತ್ತದೆ. ಆದ್ದರಿಂದ ಕಬ್ಬಿಣದ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ಮತ್ತು ನಂತರ ಒಂದು ಗಂಟೆಯವರೆಗೆ ಟೀ ಮತ್ತು ಕಾಫಿಯನ್ನು ತಪ್ಪಿಸಿ.
iv) ಕ್ಯಾಲ್ಸಿಯಂ ಮಾತ್ರೆಗಳು ಅಥವಾ ಕ್ಯಾಲ್ಸಿಯಂ ಹೊಂದಿರುವ ಆಹಾರಗಳು (ಹಾಲು), ಕಬ್ಬಿಣದ ಮಾತ್ರೆಗಳೊಂದಿಗೆ ತೆಗೆದುಕೊಳ್ಳುವುದನ್ನು ತಪ್ಪಿಸಿ. ನೀವು ಕ್ಯಾಲ್ಸಿಯಂ ಮಾತ್ರೆಗಳು ಅಥವಾ ಕ್ಯಾಲ್ಸಿಯಂ ಹೊಂದಿರುವ ಆಹಾರಗಳನ್ನು ಕೆಲವು ಗಂಟೆಗಳ ನಂತರ ತೆಗೆದುಕೊಳ್ಳಬಹುದು.
v) ಕಬ್ಬಿಣದ ಮಾತ್ರೆಗಳೊಂದಿಗೆ ಆಂಟಿಸಿಡ್ಗಳು (Antacid) ಮತ್ತು H2 ಬ್ಲಾಕರ್ಸ್ ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ಡೋಸೇಜ್ - ಸಾಮಾನ್ಯವಾಗಿ ದಿನಕ್ಕೆ 100 ಮಿಗ್ರಾಂ ಧಾತುರೂಪದ ಕಬ್ಬಿಣ ಮತ್ತು 500 ಮೈಕ್ರೋಗ್ರಾಂಗಳಷ್ಟು ಫೋಲಿಕ್ ಆಮ್ಲ ಮತ್ತು ಕಬ್ಬಿಣದ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಮೇಲಿನ ಸೂಚನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಯಾವುದೇ ಕಾರಣಕ್ಕಾಗಿ ನೀವು ಕಬ್ಬಿಣದ ಮಾತ್ರೆಗಳನ್ನು ತಡೆದುಕೊಳ್ಳಲು ಸಾಧ್ಯವಾಗದಿದ್ದರೆ ಮತ್ತು ನೀಮಗೆ ರಕ್ತಹೀನತೆ ಇದ್ದರೆ, ದಯವಿಟ್ಟು ನಿಮ್ಮ ವೈದ್ಯರನ್ನು ನೋಡಿ. ಅವರು ಔಷಧಿಗಳನ್ನು ಬದಲಾಯಿಸಲು ಅಥವಾ ಐರನ್ ಚುಚ್ಚುಮದ್ದು ನೀಡಬಹುದು.