Displaying items by tag: ಗರ್ಭಾವಸ್ಥೆಯಲ್ಲಿ ರಕ್ತಹೀನತೆ

ಅಂಜಲಿ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಳು. ಅವಳು ಈಗಷ್ಟೇ ಈ ಖುಷಿಯ ವಿಷಯವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಅವಳು ವೈದ್ಯರ ಸಲಹೆಯಂತೆ ಕಳೆದ ಎರಡು ದಿನಗಳಿಂದ ಐರನ್-ಫೋಲಿಕ್ ಆಸಿಡ್ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸಿದಳು. ಅವಳ ಮಲದ ಬಣ್ಣವನ್ನು ನೋಡಿ ಅವಳು ಭಯಗೊಂಡಿದ್ದಳು. ಇದು ಕಪ್ಪು ಆಗಿತ್ತು. ಅವಳು ತುಂಬಾ ಭಯಭೀತಳಾಗಿ ವೈದ್ಯರನ್ನು ಭೇಟಿ ಮಾಡಲು ಧಾವಿಸಿದಳು. ಅವಳು ತನ್ನ ತೊಂದರೆಯನ್ನು ವೈದ್ಯರಿಗೆ ವಿವರಿಸುತ್ತಾಳೆ. ಆಕೆಯ ವೈದ್ಯರು ನಗುತ್ತಾ, "ಅಂಜಲಿ - ಭಯಪಡಬೇಡ, ನೀನು ತೆಗೆದುಕೊಂಡ ಐರನ್ ಮಾತ್ರೆಗಳ ಕಾರಣದಿಂದಾಗಿ ನಿನ್ನ ಮಲದ ಬಣ್ಣ ಕಪ್ಪಾಗಿದೆ... ನಿನಗಾಗಿ ಮತ್ತು ಬೆಳೆಯುತ್ತಿರುವ ಮಗುವಿಗೆ ಐರನ್ ಮಾತ್ರೆಗಳು ಬಹಳ ಮುಖ್ಯವಾಗಿದೆ."

ಗರ್ಭಧಾರಣೆಯ ರಕ್ತಹೀನತೆ ವಯಸ್ಕರಲ್ಲಿ ಕಂಡುಬರುವ ರಕ್ತಹೀನತೆಗಳಲ್ಲಿ ಒಂದಾಗಿದೆ, ಇದು ಕೆಲವು ಬಾರಿ ಕೆಲವು ಕಾಯಿಲೆಯಿಂದಾಗಿ ಕಂಡುಬರುವುದಿಲ್ಲ.  ಗರ್ಭಾವಸ್ಥೆಯಲ್ಲಿ ರಕ್ತದ ಪರಿಮಾಣಕ್ಕೆ ಏನಾಗುತ್ತದೆ ಎಂಬುದನ್ನು ವಿವರಿಸಲು, ಒಂದು ಚೆಂಬು ಅರ್ಧ ನೀರಿನಿಂದ ತುಂಬಿರುವುದನ್ನು ಊಹಿಸಿ ಮತ್ತು 12 ಗ್ರಾಂಗಳಷ್ಟು ಕೆಂಪು ಬಣ್ಣವನ್ನು ಸೇರಿಸಿದೆ ಎಂದು ಭಾವಿಸಿ. ಈಗ ನೀವು 50% ಹೆಚ್ಚಿನ ನೀರನ್ನು ಬೀಕರ್ ಗೆ  ಸೇರಿಸಿದಾಗ ಮತ್ತು ಅದರ ಜೊತೆ ಕೇವಲ 3 ಗ್ರಾಂ ಕೆಂಪು ಬಣ್ಣವನ್ನು ಸೇರಿಸಿದಾಗ, ದ್ರಾವಕ ದುರ್ಬಲ ಅಥವಾ ತೆಳುವಾಗುತ್ತದ. ಅದೇ ತರಹ ಗರ್ಭಾವಸ್ಥೆಯಲ್ಲಿ ಸಂಭವಿಸುತ್ತದೆ. ಪ್ಲಾಸ್ಮಾ ಪ್ರಮಾಣವು 50% ಹೆಚ್ಚಾಗಿದ್ದರೂ, ಕೆಂಪು ಜೀವಕೋಶದ ದ್ರವ್ಯರಾಶಿಯು 15 ರಿಂದ 25% ರಷ್ಟು ಮಾತ್ರ ಹೆಚ್ಚಾಗುತ್ತದೆ.