ಮನುಷ್ಯನು ಇತರ ಸಸ್ತನಿಗಳ ಹಾಲನ್ನು ಸೇವಿಸುವ ಏಕೈಕ ಸಸ್ತನಿಯಾಗಿದ್ದಾನೆ. ಹಸು ತನ್ನ ಕರುವಿಗೋಸ್ಕರ ಹಾಲನ್ನು ಉತ್ಪಾದಿಸುತ್ತದೆ. ಆದ್ದರಿಂದ, ಹಸುವಿನ ಹಾಲು ಮನುಷ್ಯರಿಗಿಂತ ಮರಿ ಹಸುವಿಗಾಗಿಯೇ ಹೆಚ್ಚು ನಿರ್ದಿಷ್ಟವಾಗಿರುತ್ತದೆ. ಅನೇಕ ಶಿಶುಗಳಿಗೆ ಹಸುವಿನ ಹಾಲಿನಿಂದ ತೊಂದರೆಗಳಿವೆ. ಒಂದು ವರ್ಷದ ಮೊದಲೆಯೇ ಹಸುವಿನ ಹಾಲು ನೀಡಿದ ಶಿಶುಗಳಲ್ಲಿ ರಕ್ತಹೀನತೆ, ಅತಿಸಾರ ಅಥವಾ ವಾಂತಿ, ಮತ್ತು ಅಲರ್ಜಿಯ ಪ್ರತಿಕ್ರಿಯೆಯನ್ನು ಕಾಣಬಹುದು.
ಸಾಮಾನ್ಯವಾಗಿ ಪೋಷಕರು ಫಾರ್ಮುಲಾ ಹಾಲಿನ ಬದಲಿಗೆ ತಮ್ಮ ಮಗುವಿಗೆ ಹಸುವಿನ ಹಾಲನ್ನು ನೀಡುವದರ ಬಗೆಗೆ ಉತ್ಸುಕರಾಗಿರುತ್ತಾರೆ. ಇದು ಕೆಳಗಿನ ಕಾರಣಗಳಿಂದ ಆಗಿರಬಹುದು;
ಹೊಸ ತಾಯಂದಿರು ತಮ್ಮ ಮಗುವಿಗೋಸ್ಕರ ಸಾಕಷ್ಟು ಎದೆಹಾಲು ಉತ್ಪಾದಿಸುತ್ತಿದ್ದಾರಿಯೊ ಅಥವಾ ಇಲವೋ ಎಂಬುದರ ಬಗ್ಗೆ ಯಾವಾಗ್ಲೂ ಚಿಂತಿಸುತ್ತಿರುತ್ತಾರೆ. ಸ್ತನ್ಯಪಾನ ಮತ್ತು ಎದೆ ಹಾಲು ಹೆಚ್ಚಿಸುವ ವಿಧಾನಗಳ ಬಗ್ಗೆ ನನಗೆ ಅನೇಕ ಪ್ರಶ್ನೆಗಳನ್ನು ನನ್ನ ವೀಕ್ಷಕರು ಕೇಳುತ್ತಾ ಇರುತ್ತಾರೆ. ನಿಮ್ಮ ಮಗುವಿನ ಆಹಾರಕ್ಕಾಗಿ ಸ್ತನ್ಯಪಾನವು ಅತ್ಯಂತ ನೈಸರ್ಗಿಕ ಮಾರ್ಗವಾಗಿದೆ. ನಿಮ್ಮ ಮಗುವಿಗೆ ಎದೆಹಾಲು ಅತ್ಯುತ್ತಮ ಆಹಾರವಾಗಿದೆ. ನಿಮ್ಮ ಹಾಲು ಪೂರೈಕೆಯನ್ನು ಹೆಚ್ಚಿಸಲು ಯಾವುದೇ ಮಾಯಾ ಮಾತ್ರೆಗಳಿಲ್ಲ.
ಬೇಬಿ ಅಲಾರ್ಮ್ ಎಂದೂ ಕೂಡ ಕರೆಯಲ್ಪಡುವ ಬೇಬಿ ಮಾನಿಟರ್, ಶಿಶುವಿನ ಧ್ವನಿಗಳನ್ನು ದೂರದಿಂದ ಕೇಳಲು ಬಳಸುವ ಒಂದು ರೇಡಿಯೋ ವ್ಯವಸ್ಥೆಯಾಗಿದೆ. ಒಂದು ಆಡಿಯೋ ಮಾನಿಟರ್ ಟ್ರಾನ್ಸ್ಮಿಟರ್ ಘಟಕವನ್ನು ಒಳಗೊಂಡಿರುತ್ತದೆ, ಇದು ಮೈಕ್ರೊಫೋನ್ ಹೊಂದಿದ್ದು, ಮಗುವಿನ ಹತ್ತಿರ ಇದನ್ನುಇರಿಸಲಾಗುತ್ತದೆ. ಇದು ಶಬ್ದಗಳನ್ನು ರೇಡಿಯೋ ತರಂಗಗಳಾಗಿ ಬದಲಿಸಿ ಮಗುವಿನ ಆರೈಕೆಯನ್ನು ಮಾಡುತ್ತಿರುವ ವ್ಯಕ್ತಿಯ ಬಳಿ ಇರುವ ರಿಸೀವರ್ ಗೆ ತಲುಪಿಸುತ್ತದೆ. ರಿಸೀವರ್ ನ ಜೊತೆ ಇರುವ ಸ್ಪೀಕರ್ ರೇಡಿಯೋ ತರಂಗಗಳನ್ನು ಶಬ್ದ ತರಂಗಗಳಾಗಿ ಪುನಃ ಪರಿವರ್ತಿಸಿ ಮಗುವೀನ ಧ್ವನಿಯನ್ನು ಕೇಳಿಸುತ್ತದೆ. ಕೆಲವು ಬೇಬಿ ಮಾನಿಟರ್ ಗಳು ಎರಡು-ರೀತಿಯಲ್ಲಿ ಸಂವಹನವನ್ನು ಒದಗಿಸುತ್ತವೆ, ಅದು ಪೋಷಕರು ಮಗುವಿಗೆ ಮರಳಿ ಮಾತನಾಡಲು ಅವಕಾಶ ನೀಡುತ್ತದೆ (parent talk-back). ಕೆಲವು ಬೇಬಿ ಮಾನಿಟರ್ ಗಳು ಮಗುವಿಗೆ ಸಂಗೀತ ಕೇಳಿಸುವ ಆಯ್ಕೆಯನ್ನು ಹೊಂದಿದೆ. ವೀಡಿಯೊ ಕ್ಯಾಮೆರಾ ಮತ್ತು ರಿಸೀವರ್ನೊಂದಿಗೆ ಇರುವ ಮಾನಿಟರ್ ಅನ್ನು ಬೇಬಿ ಕ್ಯಾಮ್ ಎಂದು ಕರೆಯಲಾಗುತ್ತದೆ.
ಮೊದಲ ಎದೆ ಹಾಲಿನ ಪ್ರಾಮುಖ್ಯತೆ ಕುರಿತು ನೀವು ವೈದ್ಯರಿಂದ, ಮನೆಯಲ್ಲಿನ ಹಿರಿಯರಿಂದ ಅಥವಾ ದಾಯಾದಿಗಳಿಂದ ಕೇಳಿಯೇ ಇರುತ್ತೀರಿ. ಇದು ತೆಳುವಾದ ಹಳದಿ ಹಾಲು ಆಗಿದ್ದು, ಅದು ಪ್ರಸವದ ನಂತರ ಉತ್ಪತ್ತಿಯಾಗುತ್ತದೆ. ಇದು ಎರಡು ಟೇಬಲ್ ಸ್ಪೂನ್ ಗಳಿಗಿಂತ ಜಾಸ್ತಿ ಇರುವುದಿಲ್ಲ, ಆದರೆ, ಇದು ತುಂಬಾ ಪೌಷ್ಟಿಕಾಂಶದ ಹಾಲು ಮತ್ತು ಮಗುವಿಗೆ ಆಜೀವ ಪೌಷ್ಟಿಕಾಂಶವನ್ನು ನೀಡುತ್ತದೆ. ಕೊಲೊಸ್ಟ್ರಮ್, ಕೆಲವು ಮಹಿಳೆಯರಲ್ಲಿ ಪ್ರಸವದ ಮುಂಚೆಯೇ, ಅಂದರೆ, ಗರ್ಭಾವಸ್ಥೆಯ ಕೊನೆಯ ತಿಂಗಳುಗಳಲ್ಲಿ ಉತ್ಪತ್ತಿ ಆಗಿರುವ ವರದಿಗಳು ಇದೆ.
MMR ಸಂಕ್ಷೇಪಣ ಮಂಪ್ಸ್, ಮೀಸಲ್ಸ್ (ದಡಾರ), ಮತ್ತು ರುಬೆಲ್ಲಾ ಕಾಯಿಲೆಗಳನ್ನು ಪ್ರತಿನಿಧಿಸುತ್ತದೆ. ಮೀಸಲ್ಸ್, ಮಂಪ್ಸ್ ಮತ್ತು ರುಬೆಲ್ಲಾ ವೈರಸ್ ನಿಂದ ಹರಡುವ ರೋಗಗಳು ಮತ್ತು ಈ ಕಾಯಿಲೆಗಳಿಗೆ ಲಸಿಕೆಗಳನ್ನು ಕಂಡುಹಿಡಿಯುವುದಕ್ಕೆ ಮುಂಚೆಯೇ ಅವು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತಿದ್ದವು. ಈ ಕಾಯಿಲೆಗಳು ಗಂಭೀರ ಪರಿಣಾಮ ಬೀರುತ್ತವೆ. ಇತ್ತೀಚೆಗೆ ಮೀಸಲ್ಸ್ ಮತ್ತು ರುಬೆಲ್ಲಾ ವಿರುದ್ಧ ಭಾರತವು ಒಂದು ದೊಡ್ಡ ಜಾಗೃತಿ ಪ್ರಚಾರವನ್ನು ಪ್ರಾರಂಭಿಸಿದೆ.
ಈ ಮುಂಚೆ ನಾನು ರೋಗ ನಿರೋಧಕ ಲಸಿಕೆಗಳ ಪ್ರಾಮುಖ್ಯತೆ ಕುರಿತು ಒಂದು ಬ್ಲಾಗ್ ಬರೆದಿದ್ದೇನೆ. ಟಿಬಿ ಮೆನಿಂಜೈಟಿಸ್ (TB Meningitis) ಸೇರಿದಂತೆ ಮಕ್ಕಳಲ್ಲಿ ಪ್ರಸಾರವಾಗುವ ಟಿಬಿ ರೋಗಗಳ ವಿರುದ್ಧ ಉತ್ತಮ ರಕ್ಷಣೆ ನೀಡಲು ಬಿ.ಸಿ.ಜಿ ಲಸಿಕೆ ಸಾಮಾನ್ಯವಾಗಿ ಮಕ್ಕಳಿಗೆ ನೀಡಲಾಗುತ್ತದೆ.