ಆಗಸ್ಟ್ ನಲ್ಲಿ ರಾಜಸ್ಥಾನದ ಆರೋಗ್ಯ ಇಲಾಖೆ, ಸೆಪ್ಟಂಬರ್ ಆರಂಭದಿಂದ ಹೊಸ ತಾಯಂದಿರನ್ನು ವೈದ್ಯರು ಡಿಸ್ಚಾರ್ಜ್ ಫಾರ್ಮ್ ಮೇಲೆ ಸ್ಟ್ಯಾಂಪ್ ಮಾಡಿ ಮತ್ತು ತಾಯಿ-ಹಾಲು ಬ್ಯಾಂಕ್ ಸಲಹೆಗಾರರು ಅದನ್ನು ಪ್ರಮಾಣೀಕರಿಸದ ನಂತರವೇ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ಆರು ತಿಂಗಳ ಕಾಲ ಮಗುವನ್ನು ಎದೆಹಾಲು ನೀಡುವ ಉದ್ದೇಶದಿಂದ ಹೊಸ ತಾಯಂದಿರು ತಮ್ಮ ಬದ್ಧತೆಗೆ ಡಿಸ್ಚಾರ್ಜ್ ಫಾರಂ ಮೇಲೆ ಸಹಿ ಹಾಕಬೇಕೆಂದು ಕೂಡ ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹೊಸ ತಾಯಂದಿರು ತಮ್ಮ ಮಗುವಿಗೋಸ್ಕರ ಸಾಕಷ್ಟು ಎದೆಹಾಲು ಉತ್ಪಾದಿಸುತ್ತಿದ್ದಾರಿಯೊ ಅಥವಾ ಇಲವೋ ಎಂಬುದರ ಬಗ್ಗೆ ಯಾವಾಗ್ಲೂ ಚಿಂತಿಸುತ್ತಿರುತ್ತಾರೆ. ಸ್ತನ್ಯಪಾನ ಮತ್ತು ಎದೆ ಹಾಲು ಹೆಚ್ಚಿಸುವ ವಿಧಾನಗಳ ಬಗ್ಗೆ ನನಗೆ ಅನೇಕ ಪ್ರಶ್ನೆಗಳನ್ನು ನನ್ನ ವೀಕ್ಷಕರು ಕೇಳುತ್ತಾ ಇರುತ್ತಾರೆ. ನಿಮ್ಮ ಮಗುವಿನ ಆಹಾರಕ್ಕಾಗಿ ಸ್ತನ್ಯಪಾನವು ಅತ್ಯಂತ ನೈಸರ್ಗಿಕ ಮಾರ್ಗವಾಗಿದೆ. ನಿಮ್ಮ ಮಗುವಿಗೆ ಎದೆಹಾಲು ಅತ್ಯುತ್ತಮ ಆಹಾರವಾಗಿದೆ. ನಿಮ್ಮ ಹಾಲು ಪೂರೈಕೆಯನ್ನು ಹೆಚ್ಚಿಸಲು ಯಾವುದೇ ಮಾಯಾ ಮಾತ್ರೆಗಳಿಲ್ಲ.