ಹಸುವಿನ ಹಾಲಿನ ಪ್ರೋಟೀನ್ ಅಂಶವು ಹೆಚ್ಚಿನ ಮಟ್ಟದ್ದಾಗಿರುತ್ತದೆ ಮತ್ತು ಮಗುವಿನ ಅಪಕ್ವವಾದ ಮತ್ತು ಅಭಿವೃದ್ಧಿ ಹೊಂದದ ಮೂತ್ರಪಿಂಡಗಳಿಂದ ಜೀರ್ಣಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.
ಹಸುವಿನ ಹಾಲಿನಲ್ಲಿರುವ ಅತಿಯಾದ ಪ್ರೋಟೀನ್ ಮಗುವಿನ ಮೂತ್ರಪಿಂಡದಲ್ಲಿ ಅತಿಯಾದ ಹೊರೆಯಾಗಬಹುದು. ಹಸುವಿನ ಹಾಲಿನಲ್ಲಿ C, E ಮತ್ತು ತಾಮ್ರದ ವಿಟಮಿನ್ ಗಳ ಕೊರತೆಯಿದೆ. ಹಸುವಿನ ಹಾಲಿನಲ್ಲಿ ಕಬ್ಬಿಣಾಂಶ ತುಂಬಾ ಕಡಿಮೆ ಇರುತ್ತದೆ ಮತ್ತು ಈ ಹಾಲಿನಲ್ಲಿರುವ ಕ್ಯಾಲ್ಸಿಯಂ ಕಬ್ಬಿಣಾಂಶದ ಹೀರಿಕೊಳ್ಳುವಿಕೆಯನ್ನು ಪ್ರತಿಬಂಧಿಸುತ್ತದೆ. ಇದನ್ನು ಮಗುವಿನಿಂದ ಜೀರ್ಣಿಸಿಕೊಳ್ಳಲು ಸಹ ಕಷ್ಟ, ಮತ್ತು ಕೆಲವೊಮ್ಮೆ ಶಿಶುಗಳಲ್ಲಿ ಕರುಳಿನಲ್ಲಿ ರಕ್ತಸ್ರಾವವನ್ನು ಉಂಟುಮಾಡಬಹುದು ಇದು ಮಗುವಿನಲ್ಲಿ ರಕ್ತಹೀನತೆಗೆ ಕಾರಣವಾಗಬಹುದು.
ಮಗುವಿಗೆ ಮೊದಲ ವರ್ಷದಲ್ಲಿ ಸಂಪೂರ್ಣವಾಗಿ ಎದೆಹಾಲು ನೀಡುತ್ತಿದ್ದರೆ ಯಾವುದೇ ಹಾಲಿನ ಪೂರಕಗಳು/ಸಪ್ಲೀಮೆಂಟ್ಸ್ ಅನವಶ್ಯಕ. ಮಗುವಿನ ಒಂದು ವರ್ಷದ ನಂತರ, ಸಂಪೂರ್ಣವಾಗಿ ಹಸುವಿನ ಹಾಲು ನೀಡಬಹುದು ಮತ್ತು ಅದರ ಜೊತೆ ಮಗುವಿಗೆ ಘನ ಆಹಾರಗಳ (ಧಾನ್ಯಗಳು, ತರಕಾರಿಗಳು, ಹಣ್ಣುಗಳು) ಸಮತೋಲಿತ ಆಹಾರವನ್ನು ನೀಡುವದನ್ನು ಮರೆಯಬೇಡಿ. ಆದರೆ ದಿನಕ್ಕೆ ಒಂದು ಗ್ಲಾಸ್ ಅಥವಾ ಒಂದೂವರೆ ಗ್ಲಾಸ್ ನಷ್ಟೇ ಹಾಲು ನೀಡುವದನ್ನು ಮೀತಿಗೊಳಿಸಿ. ಅದಕ್ಕಿಂತ ಹೆಚ್ಚು ಹಾಲು ಹೆಚ್ಚು ಕ್ಯಾಲೊರಿಗಳನ್ನು ಒದಗಿಸಬಹುದು ಮತ್ತು ಮಗುವಿನಲ್ಲಿ ಇತರ ಆಹಾರಕ್ಕಾಗಿ ಹಸಿವನ್ನು ಕಡಿಮೆ ಮಾಡಬಹುದು. ನಿಮ್ಮ ಮಗು ಇನ್ನೂ ಘನ ಆಹಾರಗಳನ್ನು ಸೇವಿಸುತ್ತಿಲ್ಲವಾದರೆ, ನಿಮ್ಮ ಶಿಶುವೈದ್ಯರ ಜೊತೆ ಮಗುವಿನ ಅತ್ಯುತ್ತಮ ಪೌಷ್ಟಿಕಾಂಶದ ಬಗ್ಗೆ ಚರ್ಚಿಸಿ.
ಅಂಬೆಗಾಲಿಡುತ್ತಿರುವ ಮಕ್ಕಳ ಆಹಾರದಲ್ಲಿ ಹೆಚ್ಚಿನ ಕೊಬ್ಬಿನಾಂಶದ ಅಗತ್ಯವಿರುತ್ತದೆ, ಇದರಿಂದಾಗಿ ಒಂದು ವರ್ಷದ ನಂತರ ಹೆಚ್ಚಿನ ಶಿಶುಗಳಿಗೆ ಜೀವಸತ್ವ D ಹಾಲನ್ನು ಶಿಫಾರಸು ಮಾಡಲಾಗುತ್ತದೆ. ಆದರೆ, ಯಾವಾಗಲೂ ಮಗುವಿಗೆ ಪಾಶ್ಚರೀಕರಿಸಿದ ಹಾಲು (ಹಾಲನ್ನು ಅತ್ಯಧಿಕ ಉಷ್ಣತೆಯಲ್ಲಿ ಕಾಯಿಸಿ ತಕ್ಷಣವೇ ತಣಿಸುವ, ಹಾಲನ್ನು ಸಂರಕ್ಷಿಸುವ ಮತ್ತು ಅದರಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಪ್ರಕ್ರಿಯೆಗೆ ಪಾಶ್ಚರೀಕರಣ ಎನ್ನುವರು) ನೀಡಿ. ಒಂದು ಗ್ಲಾಸ್ ಹಸುವಿನ ಹಾಲು ಮಗುವಿಗೆ (1 ರಿಂದ 3 ವರ್ಷ ವಯಸ್ಸಿನ ಮಕ್ಕಳು) ಸುಮಾರು 40% ರಷ್ಟು ಶಿಫಾರಸು ಮಾಡಲಾದ ಕ್ಯಾಲ್ಸಿಯಂ ಮತ್ತು 20% ರಷ್ಟು ಶಿಫಾರಸು ಮಾಡಿದ ವಿಟಮಿನ್ D ಒದಗಿಸುತ್ತದೆ.
ನೆನಪಿರಲಿ, ಒಂದು ವರ್ಷದ ಒಳಗಿನ ಮಕ್ಕಳಿಗೆ ಖಡಾಖಂಡಿತವಾಗಿ ಹಸುವಿನ ಹಾಲು ನೀಡಬಾರದು - ಮೂರು ಪ್ರಾಥಮಿಕ ಕಾರಣಗಳಿಗಾಗಿ –
- ಮೂತ್ರಪಿಂಡಗಳ ಮೇಲೆ ಹೊರೆಯುಂಟುಮಾಡುವ ಹಲವಾರು ಪ್ರೋಟೀನ್ ಗಳನ್ನು ಹೊಂದಿರುತ್ತದೆ.
- ಕಬ್ಬಿಣಾಂಶದ ಕೊರತೆಯಿಂದಾಗಿ ಶಿಶುಗಳಲ್ಲಿ ರಕ್ತಹೀನತೆ ಆಗಬಹುದು.
- ಹಸು ಹಾಲನ್ನು ಬೇಗ ಪರಿಚಯಿಸುವದರಿಂದ ಶಿಶುಗಳಲ್ಲಿ ಹಾಲಿನ ಮೇಲಿನ ಆಸಕ್ತಿ ಕಡಿಮೆ ಆಗಬಹುದು.
ಮಗುವಿಗೆ ಒಂದು ವರ್ಷ ಆಗುವ ತನಕ ಕಾಯಿರಿ, ನಂತರ, ಮಗುವಿನ ಆರೋಗ್ಯಕರ ಬೆಳವಣಿಗೆಗೆ ಇತರ ಆಹಾರಗಳೊಂದಿಗೆ ಹಸು ಹಾಲನ್ನು ನೀಡಿ.