ಅತಿ ತೂಕ ಹೊಂದಿರುವ 4000 ಮಕ್ಕಳ ಪರೀಕ್ಷೆ ಅವರ ಶ್ವಾಶಕೋಶದ ಮೇಲೆ ಆಗುತ್ತಿರುವ ಪರಿಣಾಮ ಮತ್ತು 10 ವಯಸ್ಸಿನ ಮುಂಚೆಯೇ ಅಸ್ತಮಾ ರೋಗದ ಅಪಾಯವನ್ನು ಬಹಿರಂಗ ಪಡಿಸಿದೆ.
ಮಗುವಿನ ಮೊದಲ 3 ವರ್ಷಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತೂಕ ಪಡೆಯುವದರಿಂದ ಬಾಲ್ಯದ ಆಸ್ತಮಾ ಮತ್ತು ದುರ್ಬಲ ಶ್ವಾಸಕೋಶದ ಅಪಾಯಗಳಿಗೆ ಕಾರಣವಾಗಬಹುದು. ವಯಸ್ಸಿಗೆ ಅನುಗುಣವಾಗಿ ತೂಕ ಪಡೆದ ಮಕ್ಕಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಶ್ವಾಸಕೋಶ ಇರುವದನ್ನು ಅತಿ ವೇಗವಾಗಿ ತೂಕ ಪಡೆದ ಮಕ್ಕಳೊಂದಿಗೆ ಹೋಲಿಸಿದಾಗ ಕಂಡುಬಂದಿತು.
ಮನುಷ್ಯನು ಇತರ ಸಸ್ತನಿಗಳ ಹಾಲನ್ನು ಸೇವಿಸುವ ಏಕೈಕ ಸಸ್ತನಿಯಾಗಿದ್ದಾನೆ. ಹಸು ತನ್ನ ಕರುವಿಗೋಸ್ಕರ ಹಾಲನ್ನು ಉತ್ಪಾದಿಸುತ್ತದೆ. ಆದ್ದರಿಂದ, ಹಸುವಿನ ಹಾಲು ಮನುಷ್ಯರಿಗಿಂತ ಮರಿ ಹಸುವಿಗಾಗಿಯೇ ಹೆಚ್ಚು ನಿರ್ದಿಷ್ಟವಾಗಿರುತ್ತದೆ. ಅನೇಕ ಶಿಶುಗಳಿಗೆ ಹಸುವಿನ ಹಾಲಿನಿಂದ ತೊಂದರೆಗಳಿವೆ. ಒಂದು ವರ್ಷದ ಮೊದಲೆಯೇ ಹಸುವಿನ ಹಾಲು ನೀಡಿದ ಶಿಶುಗಳಲ್ಲಿ ರಕ್ತಹೀನತೆ, ಅತಿಸಾರ ಅಥವಾ ವಾಂತಿ, ಮತ್ತು ಅಲರ್ಜಿಯ ಪ್ರತಿಕ್ರಿಯೆಯನ್ನು ಕಾಣಬಹುದು.
ಸಾಮಾನ್ಯವಾಗಿ ಪೋಷಕರು ಫಾರ್ಮುಲಾ ಹಾಲಿನ ಬದಲಿಗೆ ತಮ್ಮ ಮಗುವಿಗೆ ಹಸುವಿನ ಹಾಲನ್ನು ನೀಡುವದರ ಬಗೆಗೆ ಉತ್ಸುಕರಾಗಿರುತ್ತಾರೆ. ಇದು ಕೆಳಗಿನ ಕಾರಣಗಳಿಂದ ಆಗಿರಬಹುದು;