Displaying items by tag: ಬೇಬಿ ಮಾನಿಟರ್

ಬೇಬಿ ಅಲಾರ್ಮ್ ಎಂದೂ ಕೂಡ ಕರೆಯಲ್ಪಡುವ ಬೇಬಿ ಮಾನಿಟರ್, ಶಿಶುವಿನ ಧ್ವನಿಗಳನ್ನು ದೂರದಿಂದ ಕೇಳಲು ಬಳಸುವ ಒಂದು ರೇಡಿಯೋ ವ್ಯವಸ್ಥೆಯಾಗಿದೆ. ಒಂದು ಆಡಿಯೋ ಮಾನಿಟರ್ ಟ್ರಾನ್ಸ್ಮಿಟರ್ ಘಟಕವನ್ನು ಒಳಗೊಂಡಿರುತ್ತದೆ, ಇದು ಮೈಕ್ರೊಫೋನ್ ಹೊಂದಿದ್ದು, ಮಗುವಿನ ಹತ್ತಿರ ಇದನ್ನುಇರಿಸಲಾಗುತ್ತದೆ. ಇದು ಶಬ್ದಗಳನ್ನು ರೇಡಿಯೋ ತರಂಗಗಳಾಗಿ ಬದಲಿಸಿ ಮಗುವಿನ ಆರೈಕೆಯನ್ನು ಮಾಡುತ್ತಿರುವ ವ್ಯಕ್ತಿಯ ಬಳಿ ಇರುವ ರಿಸೀವರ್ ಗೆ ತಲುಪಿಸುತ್ತದೆ. ರಿಸೀವರ್ ನ  ಜೊತೆ ಇರುವ ಸ್ಪೀಕರ್ ರೇಡಿಯೋ ತರಂಗಗಳನ್ನು ಶಬ್ದ ತರಂಗಗಳಾಗಿ ಪುನಃ ಪರಿವರ್ತಿಸಿ ಮಗುವೀನ ಧ್ವನಿಯನ್ನು ಕೇಳಿಸುತ್ತದೆ. ಕೆಲವು ಬೇಬಿ ಮಾನಿಟರ್ ಗಳು ಎರಡು-ರೀತಿಯಲ್ಲಿ ಸಂವಹನವನ್ನು ಒದಗಿಸುತ್ತವೆ, ಅದು ಪೋಷಕರು ಮಗುವಿಗೆ ಮರಳಿ ಮಾತನಾಡಲು ಅವಕಾಶ ನೀಡುತ್ತದೆ (parent talk-back). ಕೆಲವು ಬೇಬಿ ಮಾನಿಟರ್ ಗಳು ಮಗುವಿಗೆ ಸಂಗೀತ ಕೇಳಿಸುವ ಆಯ್ಕೆಯನ್ನು ಹೊಂದಿದೆ. ವೀಡಿಯೊ ಕ್ಯಾಮೆರಾ ಮತ್ತು ರಿಸೀವರ್ನೊಂದಿಗೆ ಇರುವ ಮಾನಿಟರ್ ಅನ್ನು ಬೇಬಿ ಕ್ಯಾಮ್ ಎಂದು ಕರೆಯಲಾಗುತ್ತದೆ.

Published in Kannada Baby Blogs