Friday, 14 September 2018 07:35

ಗರ್ಭಾವಸ್ಥೆಯಲ್ಲಿ ಪೈಕಾ (Pica- ಆಹಾರೇತರ ವಸ್ತುಗಳನ್ನು ತಿನ್ನುವ ಕಡುಬಯಕೆ)

Written by

ತುಂಬಾ ಮಹಿಳೆಯರು ಕಟ್ಟಿಗೆ, ಮರದ ಸಿಪ್ಪೆ, ಕೆಸರು, ಬಳಪ, ಇದ್ದಿಲು ಮತ್ತು ಟೂತ್ಪೇಸ್ಟ್ ಗಳಂತಹ ಆಹಾರವಲ್ಲದ ಪದಾರ್ಥಗಳನ್ನು ತಿನ್ನುವ ಕಡುಬಯಕೆಯ ಬಗ್ಗೆ ನನ್ನ ಹತ್ತಿರ ನನ್ನ ಅನಿಸಿಕೆ ಪಡೆಯಲು ಕೇಳುತ್ತಿರುತ್ತಾರೆ. ಆಹಾರೇತರ ವಸ್ತುಗಳಿಗೆ ಈ ಹಂಬಲಿಸುವಿಕೆಯನ್ನು ಪೈಕಾ ಎಂದು ಕರೆಯಲಾಗುತ್ತದೆ. ಪೈಕಾ ಮಕ್ಕಳಲ್ಲಿ ಕೂಡ ಕಂಡುಬರುತ್ತದೆ. ಪೈಕಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಆದರೆ ಕೆಲವು ಕೊರತೆಗಳಿಗೆ ಸಂಬಂಧಿಸಿರಬಹುದು ಎಂದು ತಜ್ಞರು ನಂಬಿದ್ದಾರೆ. ಅವುಗಳಲ್ಲಿ ಒಂದು ಕಬ್ಬಿಣದ ಕೊರತೆ.

 

ಆದರೆ ಗರ್ಭಿಣಿ ಸ್ತ್ರೀ ಅವರು ತಿನ್ನುವುದರಲ್ಲಿ ಜಾಗರೂಕರಾಗಿರಬೇಕು. ಕೆಲವು ಕಡುಬಯಕೆಗಳು ದೈಹಿಕ ಅಥವಾ ಮಾನಸಿಕ ಅಸ್ವಸ್ಥತೆಗೆ ಒಂದು ಸೂಚಕವಾಗಿರಬಹುದು. ಈ ವಸ್ತುಗಳನ್ನು ತಿನ್ನುವುದರಿಂದ ಮಗುವಿಗೆ ಹಾನಿಯಾಗಬಹುದು. ಆಹಾರವಲ್ಲದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಪೌಷ್ಟಿಕಾಂಶದ ವಸ್ತುಗಳ ಹೀರಿಕೊಳ್ಳುವಿಕೆಯಲ್ಲೂ ಸಹ ಮಧ್ಯಪ್ರವೇಶಿಸಬಹುದು. ಆದ್ದರಿಂದ, ನೀವು ಈ ಕಡುಬಯಕೆಗಳು ಯಾವುದಾದರೂ ಇದ್ದರೆ ನಿಮ್ಮ ವೈದ್ಯರಿಗೆ ತಿಳಿಸಿದರೆ ವೈದ್ಯರು ಸಾಮಾನ್ಯವಾಗಿ ನಿಮ್ಮ ಚಿಕಿತ್ಸೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವರು.

Last modified on Friday, 14 September 2018 07:45
Dr Padma

Dr Padma is a Family care physician and is the Founder and CEO of MedHealthTV.

www.medhealthtv.com

Leave a comment

Make sure you enter all the required information, indicated by an asterisk (*). HTML code is not allowed.