Thursday, 30 August 2018 07:12

ಗರ್ಭಾವಸ್ಥೆಯಲ್ಲಿ ಬಿಳಿ ವಿಸರ್ಜನೆ - ಇದು ಸಾಮಾನ್ಯವೇ?

Written by

ಗರ್ಭಾವಸ್ಥೆಯಲ್ಲಿ ಮಹಿಳೆ ಹಾರ್ಮೋನಿನ ಬದಲಾವಣೆಗಳಿಗೆ ಒಳಗಾಗುತ್ತಾಳೆ. ಈ ಬದಲಾವಣೆಗಳು ಗರ್ಭಾವಸ್ಥೆಯ ಲಕ್ಷಣಗಳಿಗೆ ಕಾರಣವಾಗಬಹುದು. ಗರ್ಭಧಾರಣೆಯ ಸಮಯದಲ್ಲಿ ಸೌಮ್ಯವಾದ ಯೋನಿ ವಿಸರ್ಜನೆ ಸಾಮಾನ್ಯವಾಗಿದೆ. ಇದು ಸಾಮಾನ್ಯವಾಗಿ ತೆಳ್ಳಗಿನ, ಹಾಲಿನ ಬಣ್ಣ ಮತ್ತು ಸ್ವಲ್ಪ ವಾಸನೆಯುಕ್ತ ಆಗಿರುತ್ತದೆ. ಇದನ್ನು ಲ್ಯುಕೊರಿಯಾ ಎಂದು ಕರೆಯಲಾಗುತ್ತದೆ. ಈ ವಿಸರ್ಜನೆ ಸಾಮಾನ್ಯವಾಗಿ ಗರ್ಭಕಂಠ ಮತ್ತು ಯೋನಿಯ ಸ್ರಾವಗಳು ಮತ್ತು ಹಳೆಯ ಕೋಶಗಳಿಂದ ಮಾಡಲ್ಪಟ್ಟಿದೆ, ಇದು ಕೆಲವು ನಿರುಪದ್ರವ ಬ್ಯಾಕ್ಟೀರಿಯಾಗಳನ್ನು ಹೊಂದಿರಬಹುದು. ಗರ್ಭವತಿ ಮಹಿಳೆಯರಲ್ಲಿ ತಮ್ಮ ಗರ್ಭಧಾರಣೆಯ ಹತ್ತಿರದ ದಿನಗಳಲ್ಲಿ ಹೆಚ್ಚು ಬಿಳಿ ವಿಸರ್ಜನೆ ಆಗುತ್ತದೆ ಎಂದು ಹೇಳಲಾಗುತ್ತದೆ.

 

ಗಮನಿಸಬೇಕಾದ ಲಕ್ಷಣಗಳು:

i) ವಿಸರ್ಜನೆಯ ಪ್ರಮಾಣವು ಹಠಾತ್ತಾಗಿ ಹೆಚ್ಚಾಗುತ್ತಿದ್ದರೆ ಮತ್ತು ನೀವು ಸಾಕಷ್ಟು ನೀರಿನಂಶದ ದ್ರವವನ್ನು ಸೋರಿಕೆ ಮಾಡುತ್ತಿದ್ದರೆ ಅಥವಾ ವಿಸರ್ಜನೆ ಅಸಾಮಾನ್ಯವಾಗಿ ದಪ್ಪವಾಗಿದ್ದರೆ, ಅದು ಅಕಾಲಿಕ ಪ್ರಸವದ ಸಂಕೇತವಾಗಿದೆ. ನಿಮ್ಮ ವೈದ್ಯರನ್ನು ತಕ್ಷಣವೇ ಸಂಪರ್ಕಿಸಿ.

ii) ಮೃದುವಾದ ಬಿಳಿ ಅಥವಾ ಬೂದು ವಿಸರ್ಜನೆಯನ್ನು ಮೀನಿನ ವಾಸನೆಯೊಂದಿಗೆ ಹೊಂದಿದ್ದರೆ, ಇದು ಬ್ಯಾಕ್ಟೀರಿಯಾದ ಸೋಂಕಿನ ಕಾರಣದಿಂದಾಗಿರಬಹುದು. ಗರ್ಭಾವಸ್ಥೆಯಲ್ಲಿ ಈ ಸೋಂಕು ಸಾಮಾನ್ಯವಾಗಿದೆ, ಆದರೆ ಸೋಂಕು ಗರ್ಭಾಶಯದೊಳಗೆ ಏರಿದರೆ ಅದು ಅಕಾಲಿಕ ಪ್ರಸವಕ್ಕೆ ಕಾರಣವಾಗಬಹುದು, ಆದ್ದರಿಂದ ಚಿಕಿತ್ಸೆ ಪಡೆಯುವುದು ಉತ್ತಮ.

iii) ವಿಸರ್ಜನೆಯು ಬಣ್ಣದಲ್ಲಿ ಹಳದಿ ಅಥವಾ ಹಸಿರು ಬಣ್ಣಕ್ಕೆ ಬದಲಾಗಿದ್ದರೆ ಮತ್ತು ವಾಸನೆಯುಕ್ತ ಆಗಿದ್ದು ಯೋನಿ ಪ್ರದೇಶದಲ್ಲಿ ಕೆಂಪು ಮತ್ತು ತುರಿಕೆ ಇದ್ದು ಮೂತ್ರ ವಿಸರ್ಜನೆ ಉರಿಯಿಂದ ಉಂಟಾಗುತ್ತದೆ. ಅದರ ಬಗ್ಗೆ ನಿಮ್ಮ ವೈದ್ಯರಿಗೆ ನೀವು ವರದಿ ಮಾಡಬೇಕು ಮತ್ತು ಅದಕ್ಕೆ ಅವರು ಸೂಕ್ತ ಚಿಕಿತ್ಸೆ ನೀಡಬಹುದು. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾದ ಸೋಂಕು ಒಂದು ಯೀಸ್ಟ್ ಸೋಂಕು ಅಥವಾ ಕ್ಯಾಂಡಿಡಿಯಾಸಿಸ್ ಆಗಿದೆ.

 

ಯೋನಿ ಸೋಂಕು ತಡೆಗಟ್ಟಲು ನೀವು ಏನು ಮಾಡಬಹುದು?

i) ಶುದ್ಧ ನೀರಿನಿಂದ ಜನನಾಂಗದ ಪ್ರದೇಶವನ್ನು ತೊಳೆಯಿರಿ ಮತ್ತು ಪ್ರದೇಶವನ್ನು ಚೆನ್ನಾಗಿ ಒಣಗಿಸಿ.

ii) ಸಡಿಲ ಉಡುಪು ಮತ್ತು ಒಳ ಉಡುಪುಗಳನ್ನು ಧರಿಸಿ.

iii)  ಮೂತ್ರ ವಿಸರ್ಜನೆಯ ನಂತರ ಜನನಾಂಗದ ಮುಂಭಾಗದಿಂದ ಹಿಂದಿನವರೆಗೂ ಶುದ್ಧ ಬಟ್ಟೆಯಿಂದ ಒರೆಸಿ.

Last modified on Thursday, 30 August 2018 07:37
Dr Padma

Dr Padma is a Family care physician and is the Founder and CEO of MedHealthTV.

www.medhealthtv.com

Leave a comment

Make sure you enter all the required information, indicated by an asterisk (*). HTML code is not allowed.