ಗೊಂದಲ ಮತ್ತು ವಿಲಕ್ಷಣವಾದ ಕನಸುಗಳು ಯಾರಿಗಾದರೂ ಸರಿ ಸ್ವಲ್ಪ ಭಯವನ್ನು ಉಂಟುಮಾಡುತ್ತವೆ. ಗರ್ಭಾವಸ್ಥೆ ನಿಮಗೆ ಹೆಚ್ಚು ತೀವ್ರ ಮತ್ತು ವಿಚಿತ್ರ ಕನಸುಗಳನ್ನು ತರುತ್ತದೆ. ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಗರ್ಭಿಣಿಯಾಗದವರಿಗಿಂತ ತೀವ್ರ ಮತ್ತು ಗೊಂದಲದ ಕನಸುಗಳನ್ನು ಕಾಣುತ್ತಾರೆ ಎಂದು ಅಧ್ಯಯನಗಳನ್ನು ಕಂಡುಕೊಂಡಿವೆ. ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದಲ್ಲಿ ಮಹಿಳೆಯರು ಹಿಂದಿನ ಹಂತಗಳಿಗಿಂತ ಹೆಚ್ಚು ಭ್ರಮೆಭರಿತ ಕನಸುಗಳನ್ನು ಅನುಭವಿಸುತ್ತಾರೆ.
ವಿಟಮಿನ್ D ನಿಮಗೆ ಆರೋಗ್ಯಯುತ ಮೂಳೆಗಳನ್ನು ನೀಡುವದಲ್ಲದೆ ವಿವಿಧ ರೀತಿಯ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ದಿಂದ ಉಂಟಾಗುವ ಮರಣಗಳನ್ನು ಕಡಿಮೆಗೊಳಿಸಬಹುದು, ವಿಶೇಷವಾಗಿ ಕಡಿಮೆ ಬಾಡಿ ಮಾಸ್ ಇಂಡೆಕ್ಸ್ (BMI) ಹೊಂದಿರುವ ಮಹಿಳೆಯರಲ್ಲಿ ಎಂದು ಒಂದು ಅಧ್ಯಯನ ತಿಳಿಸಿದೆ. ಉತ್ತರ ಅಮೆರಿಕಾದ ಮೆನೋಪಾಸ್ ಸೊಸೈಟಿಯ (NAMS) ಜರ್ನಲ್ ಮೆನೊಪಾಸ್ ನಲ್ಲಿ ಸೆಪ್ಟೆಂಬರ್ 19, 2018 ರಂದು ಈ ಅಧ್ಯಯನವನ್ನು ಪ್ರಕಟಿಸಲಾಯಿತು.
ಹೊಸ ಸಂಶೋಧನೆಯು "ಗರ್ಭಿಣಿ ಮಹಿಳೆಯರು ಹೊಟ್ಟೆಯಲ್ಲಿರುವ ತನ್ನ ಮಗು ಮತ್ತು ತನಗಾಗಿ ತಿನ್ನಬೇಕು" ಎಂಬ ಎಲ್ಲ ಹೇಳಿಕೆಗಳು ವಾಸ್ತವಿಕವಾಗಿ ಸುಳ್ಳು ಮತ್ತು ಮಗುವಿಗೆ ಮತ್ತು ತಾಯಿಗೆ ಇದರಿಂದ ಆಗುವ ಆರೋಗ್ಯದ ಅಪಾಯದ ಕುರಿತು ಎಚ್ಚರಿಸಿದೆ. ಗರ್ಭಾವಸ್ಥೆಯಲ್ಲಿ ''ಇಬ್ಬರಿಗೋಸ್ಕರ ತಿನ್ನುವುದು" ಮತ್ತು ಇದರಿಂದ ಸಾಕಷ್ಟು ತೂಕ ಪಡೆಯುವುದು ಅವರ ಮಗುವಿನ ಮೇಲೆ ಅನಪೇಕ್ಷಿತ ಪರಿಣಾಮ ಬೀರುತ್ತದೆ.