ಈ ವಿಚಿತ್ರ ಕನಸುಗಳು ಬೀಳಲು ಗರ್ಭಾವಸ್ಥೆ ಯಾವ ತರಹ ಕಾರಣವಾಗಿದೆ? ಗರ್ಭಾವಸ್ಥೆಗೆ ಮತ್ತು ಈ ಕನಸುಗಳಿಗೆ ಇರುವ ಸಂಭಂದವೇನು?
ಗರ್ಭಾವಸ್ಥೆಗೆ ಮತ್ತು ಈ ತರಹದ ಕನಸುಗಳಿಗೆ ಯಾವುದೇ ರೀತಿಯ ಸಂಭಂದವಿಲ್ಲ, ಆದರೆ, ನೀವು ಗರ್ಭಿಣಿ ಆದ ಮೇಲೆ ನಿಮ್ಮ ಅಪೂರ್ತಿಯಾದ ಅಥವಾ ಅರೆಮರೆ ನಿದ್ದೆ ಈ ವಿಚಿತ್ರವಾದ ಕನಸುಗಳಿಗೆ ಕಾರಣವಾಗಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ನಮ್ಮ ನಿದ್ರೆ ಚಕ್ರವು ಐದು ಹಂತಗಳನ್ನು ಹೊಂದಿದೆ - ಕ್ಷಿಪ್ರ ಕಣ್ಣಿನ ಚಲನೆಯು (Rapid Eye Movement, REM: ನಿದ್ರೆಯ 25% ಭಾಗ) ಒಂದಾಗಿದೆ ಮತ್ತು ಈ ಹಂತದಲ್ಲಿ ನಮಗೆ ಹೆಚ್ಚು ಕನಸುಗಳು ಬೀಳುತ್ತವೆ.
REM ಹಂತವು ನೀವು ನಿದ್ದೆಯಲ್ಲಿ ಜಾರಿದ 70 ರಿಂದ 90 ನಿಮಿಷಗಳ ನಂತರ ಸಂಭವಿಸುತ್ತದೆ ಎಂದು ಹೇಳಲಾಗಿದೆ. ನಿಮ್ಮ ನಿದ್ರೆ ಚಕ್ರ ಪುನರಾವರ್ತನೆಯಂತೆ ಈ ಹಂತವು ರಾತ್ರಿಯಿಡಿ ಪುನರಾವರ್ತಿಸುತ್ತದೆ.
ನೀವು ನಿದ್ದೆ ಮಾಡುವಾಗ ನಿಮ್ಮ ಮೆದುಳು ಹೆಚ್ಚು ಸಕ್ರಿಯವಾಗಿರುತ್ತದೆ ಮತ್ತು ಇತ್ತೀಚಿನ ಸಂದರ್ಭಗಳು ಮತ್ತು ಭಾವನೆಗಳನ್ನು ಪುನಃ ನೆನಪಿಸಿಕೊಳ್ಳುತ್ತಿರುತ್ತದೆ. ಹೊಸ ಮಾಹಿತಿ ಅಚ್ಚಾಗಿ ಉಳಿಯಲು ಮತ್ತು ಇದರ ಸಂಸ್ಕರಣೆಗೆ ಕನಸುಗಳು ಸಹಾಯ ಮಾಡುತ್ತದೆ.
ನಿದ್ರೆಯ ಚಕ್ರವು ಅಡಚಣೆಗೊಳಗಾದರೆ ಮತ್ತು ನೀವು REM ಹಂತದಲ್ಲಿ ಎಚ್ಚರಗೊಂಡ ನಂತರ ನೀವು ಕನಸನ್ನು ಸ್ಪಷ್ಟವಾಗಿ ನೆನಪಿಟ್ಟುಕೊಳ್ಳಲು ಸಾಧ್ಯತೆ ಹೆಚ್ಚಾಗಿರುತ್ತದೆ. ಗರ್ಭಧಾರಣೆಯ ಸಮಯದಲ್ಲಿ ವಿವಿಧ ಹಂತಗಳಲ್ಲಿ ಮಹಿಳೆಯರು ಅಸಮತೋಲನದ ನಿದ್ರೆಯನ್ನು ಹೊಂದುತ್ತಾರೆ.
ಮೊದಲ ತ್ರೈಮಾಸಿಕದಲ್ಲಿ ನಿದ್ರಾಹೀನತೆ ಸಾಮಾನ್ಯ ಮತ್ತು ಇದಕ್ಕೆ ಕಾರಣ ಪ್ರೊಜೆಸ್ಟರಾನ್ ಮಟ್ಟಗಳು. ನಿಮ್ಮ ಗರ್ಭಾವಸ್ಥೆಯ 12-16 ವಾರಗಳವರೆಗೆ ಈ ಮಟ್ಟಗಳು ಕಡಿಮೆ ಆಗುತ್ತಾ ಹೋಗುತ್ತವೆ. 3 ನೇ ತ್ರೈಮಾಸಿಕದಲ್ಲಿ, ಅಂದರೆ 28 ವಾರಗಳ ನಂತರ, ಗರ್ಭಿಣಿ ಮಹಿಳೆ ಹೆಚ್ಚು ಅನಾನುಕೂಲತೆಯನ್ನು ಅನುಭವಿಸಲು ಪ್ರಾರಂಭಿಸುತ್ತಾರೆ ಮತ್ತು ಆದ್ದರಿಂದ ನಿದ್ರೆ ಕೂಡ ತೊಂದರೆಗೊಳಗಾಗುತ್ತದೆ. ಕೊನೆಯ ತ್ರೈಮಾಸಿಕದಲ್ಲಿ ಗಾಢ ನಿದ್ರೆ ಪಡೆಯದೇ ಇರುವುದು, ಸ್ಲೀಪ್ ಆಪಿನಿಯ (ನಿದ್ದೆಯಲ್ಲಿ ಉಸಿರಾಟದ ತೊಂದರೆ) ಮತ್ತು ರಾತ್ರಿಯಲ್ಲಿ ಆಗಾಗ್ಗೆ ಮೂತ್ರವಿಸರ್ಜನೆ ವಿಪರೀತ ತೊಂದರೆಯಾಗಿ ಕಾಡುತ್ತದೆ. ರೆಸ್ಟ್ ಲೆಸ್-ಲೆಗ್ಸ್-ಸಿಂಡ್ರೋಮ್, ಇದರಲ್ಲಿ ನಿಮಗೆ ನಿಮ್ಮ ಕಾಲುಗಳನ್ನು ಅಳುಗಾಡಿಸಲು ಪ್ರಚೋದಿತ ಅನಿಸಬಹುದು ಮತ್ತು ಇದು ನಿಮ್ಮ ಗಾಢ ನಿದ್ದೆಯನ್ನು ಭಂಗ ಮಾಡುತ್ತದೆ.
ಆಗಾಗ್ಗೆ ನಿದ್ರಾಹೀನತೆಯು ನಿದ್ರೆ ಚಕ್ರದ REM ಹಂತದ ಸಮಯದಲ್ಲಿ ಎಚ್ಚರಗೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ, ಅದು ಕನಸುಗಳನ್ನು ಹೆಚ್ಚು ತಕ್ಷಣದ, ತೀವ್ರವಾದ ಮತ್ತು ಸ್ಮರಣೀಯವಾಗಿ ತೋರುತ್ತದೆ.
ನೀವು ಗರ್ಭಿಣಿ ಇದ್ದಲ್ಲಿ ನಿಮ್ಮ ಕನಸುಗಳು ಜಟಿಲವಾಗುತ್ತ ಹೋಗುತ್ತವೆ
ಗರ್ಭಿಣಿ ಮಹಿಳೆಯರು ಪದೇ-ಪದೇ ದುಃಸ್ವಪ್ನಗಳನ್ನು ಕಂಡಿರುವುದನ್ನು ವರದಿ ಮಾಡಿದ್ದಾರೆ, ಅವುಗಳಲ್ಲಿ ಅನೇಕವು ಹೆರಿಗೆ ಮತ್ತು ನವಜಾತ ಶಿಶುವಿಗೆ ಅಪಾಯಕ್ಕೆ ಸಂಭಂದಿಸಿದೆ ಎಂದು ನವೆಂಬರ್ 2016 ರಲ್ಲಿ BMC Pregnancy and Childbirth ಪತ್ರಿಕೆಯಲ್ಲಿ ಪ್ರಕಟವಾದ ಒಂದು ಅಧ್ಯಯನ ಹೇಳಿದೆ. ಸಂಶೋಧಕರು 17 ರಿಂದ 44 ವಯಸ್ಸಿನ ನಡುವಿನ 406 ಗರ್ಭಿಣಿ ಮಹಿಳೆಯರನ್ನು ಸಮೀಕ್ಷೆ ಮಾಡಿದ್ದಾರೆ ಮತ್ತು ಗರ್ಭಿಣಿ ಮಹಿಳೆಯರು ಗರ್ಭವತಿ ಅಲ್ಲದೆ ಇರುವ ಮಹಿಳೆಯರಿಗಿಂತ ಹೆಚ್ಚು ದುಃಸ್ವಪ್ನಗಳನ್ನು ಅನುಭವಿಸಿದ್ದಾರೆ ಎಂದು ವರದಿ ಮಾಡಿದ್ದಾರೆ. ಹೆಚ್ಚಿನ ಕನಸುಗಳು ತಮ್ಮ ಮಗುವಿನ ಬಗೆಗೆ ಆಗಿದ್ದವು ಎಂದು ಕೂಡ ತಿಳಿಸಿದ್ದಾರೆ.
ಹೆಚ್ಚಿನ ಕನಸುಗಳು ದೈನಂದಿನ ಜೀವನಕ್ಕೆ ಸಂಭಂದಿಸಿದ್ದು ಹೆಚ್ಚು ರೋಮಾಂಚಕ ಮತ್ತು ವಿಚಿತ್ರವಾಗಿರುತ್ತವೆ. ನಿಮಗೆ ಕೆಲವೊಮ್ಮೆ ಈ ಕನಸು ಹೇಗೆ ಸಾಧ್ಯವಾಯಿತು ಎಂದು ಅನಿಸಬಹುದು ಆದರೆ ಹೆಚ್ಚಿನ ಕನಸುಗಳು ನಮ್ಮ ದಿನನಿತ್ಯದ ಆತಂಕಗಳಿಗೆ ಸಂಭಂದಿಸಿರುತ್ತದೆ.