ನವಜಾತ ಶಿಶು ವಯಸ್ಕರಿಗಿಂತ ಹೆಚ್ಚು ವೇಗವಾಗಿ ಉಸಿರಾಡುತ್ತದೆ. ನವಜಾತ ಶಿಶುವಿನೊಂದಿಗೆ ಹೋಲಿಸಿದರೆ ವಯಸ್ಕರು ಪ್ರತಿ ನಿಮಿಷಕ್ಕೆ ಸುಮಾರು 18-20 ಉಸಿರಾಟಗಳು ತೆಗೆದುಕೊಳ್ಳುತ್ತಾರೆ, ಆದರೆ ಶಿಶುಗಳು ಪ್ರತಿ ನಿಮಿಷಕ್ಕೆ ಸುಮಾರು 40-60 ಬಾರಿ ಉಸಿರಾಡುತ್ತಾರೆ. ನವಜಾತ ಶಿಶುಗಳಿಗೆ ಅಧಿಕ ಆಮ್ಲಜನಕವನ್ನು ಹಿಡಿದಿಡುವಷ್ಟು ಶ್ವಾಸಕೋಶ ವೃದ್ಧಿಯಾಗಿರುವದಿಲ್ಲ, ಆದ್ದರಿಂದ ಶಿಶುಗಳು ನಿರಂತರವಾಗಿ ಒಳಗೆ-ಹೊರಗೆ ಉಸಿರಾಡಬೇಕಾಗತ್ತದೆ.
ಮಗುವಿನ ಉಸಿರಾಟ ಲಯಬದ್ಧವಾಗಿರುವದಿಲ್ಲ. ನವಜಾತ ಶಿಶುಗಳು ಸಾಕಷ್ಟು ವೇಗವಾಗಿ, ಆಳವಿಲ್ಲದ ಉಸಿರು ಮತ್ತು ಇತರೆ ಸಮಯಗಳಲ್ಲಿ ಧೀರ್ಘವಾಗಿ ಮತ್ತು ನಿಧಾನ ಗತಿಯಲ್ಲಿ ಉಸಿರಾಡುತ್ತವೆ. ಇನ್ನು ಕೆಲವೊಮ್ಮೆ ಶಿಶುಗಳು ಉಸಿರಾಟವನ್ನು ಕೆಲ ಸೆಕೆಂಡುಗಳ ಕಾಲ ನಿಲ್ಲಿಸಬಹುದು ಮತ್ತೆ ಪುನಃ ಉಸಿರಾಡಲು ಶುರು ಮಾಡಬಹುದು. ಕೆಲವು ಸಂದರ್ಭಗಳಲ್ಲಿ ಮಗು ಕೆಲ ಸೆಕೆಂಡುಗಳ ಕಾಲ ಉಸಿರಾಡದೆ ಇರಬಹುದು. ಇದು ಸಾಮಾನ್ಯವಾಗಿದೆ ಮತ್ತು ಇದನ್ನು 'ಪಿರಿಯಾಡಿಕ್ ಬ್ರಿಥಿಂಗ್' ಎಂದು ಕರೆಯುತ್ತಾರೆ. ಇದು ಬಹುತೇಕ ಆರೋಗ್ಯಕರ ಶಿಶುಗಳಲ್ಲಿ ಕಂಡುಬರುತ್ತದೆ. ಸಮಯ ಮತ್ತು ಪೂರ್ಣ ವಿಕಸನೆಯ ನಂತರ ಹೆಚ್ಚಿನ ಶಿಶುಗಳು ಈ ರೀತಿಯ ಉಸಿರಾಟವನ್ನು ನಿಲ್ಲಿಸಿ ಸಾಮಾನ್ಯವಾದ ಉಸಿರಾಟದ ಅಭ್ಯಾಸಕ್ಕೆ ತಿರುಗುತ್ತವೆ.
ಕೆಲವು ಸಂದರ್ಭಗಳಲ್ಲಿ, ಶಬ್ದಭರಿತ ಉಸಿರಾಟವು ಗಾಳಿಯ ಚಲನೆ ಮಗುವಿನ ಗಂಟಲಿನ ಹಿಂಬಾಗದಲ್ಲಿ ಕೂಡಿಟ್ಟುಕೊಂಡಿರುವ ಲಾಲರಸದ ಮೇಲೆ ಹಾಯುವದರಿಂದ ಉಂಟಾಗುತ್ತದೆ. ವಯಸ್ಕರಂತೆ, ಶಿಶುಗಳಿಗೆ ತಮ್ಮ ಗಂಟಲನ್ನು ಸರಿ ಮಾಡಿಕೊಳ್ಳುವದಾಗಲಿ ಅಥವಾ ಕೆಮ್ಮುವದಾಗಲಿ ಆಗುವದಿಲ್ಲ ಆದ್ದರಿಂದ ಲಾಲಾರಸ ಮತ್ತು ಲೋಳೆಯು ಮಗುವಿನ ಗಂಟಲಲ್ಲಿ ಶೇಖರಣೆ ಆಗುತ್ತದೆ.
ಇದಲ್ಲದೆ, ನವಜಾತ ಮೂಗು ಚಿಕ್ಕದಾಗಿರುವದರಿಂದ, ಅವುಗಳ ಮೂಗಿನ ಹೊಳ್ಳೆಗಳು ಕಿರಿದಾಗಿವೆ ಮತ್ತು ಈ ಹಾದಿಗಳ ಮೂಲಕ ಗಾಳಿ ಹಾದು ಹೋದಾಗ ಕೆಲವೊಮ್ಮೆ ಕೆಲವು ಶಬ್ದಗಳು ಉಂಟಾಗುವುದು ಸಾಮಾನ್ಯವಾಗಿದೆ. ಶಬ್ದವು ಅಸಹಜವೆಂದು ತೋರುತ್ತದೆಯಾದರೂ, ಅವರು ಅಭಿವೃದ್ಧಿ ಹೊಂದುತ್ತಿರುವವರೆಗೂ ಮತ್ತು ಆರೋಗ್ಯಕರವಾಗಿ ಇರುವವರೆಗೂ ಚಿಂತಿಸಬೇಕಾಗಿಲ್ಲ.
ಮೂಗಿನ ಸ್ರಾವಗಳು ಗಟ್ಟಿಯಾಗುತ್ತಿದ್ದರೆ ಸಾಮಾನ್ಯ 'saline nose drops' ಗಳನ್ನೂ ಬಳಸುವದು ಸಹಾಯಕವಾಗುತ್ತದೆ. ಈ 'ಡ್ರಾಪ್ಸ್' ಗಳು ಮೂಗಿನ ಸ್ರವಿಸುವಿಕೆಯನ್ನು ದ್ರವೀಕರಿಸುತ್ತವೆ ಮತ್ತು ಮಗುವಿನ ಮೂಗಿನ ಹೊಳ್ಳೆಯನ್ನು ತಡೆಯುವ ಲೋಳೆವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಮಾಡುವ ಮೊದಲು, ನಿಮ್ಮ ಮಗುವಿನ ವೈದ್ಯರನ್ನು ಪರೀಕ್ಷಿಸಿ ಮತ್ತು ಶಬ್ಧ ಉಸಿರಾಟಕ್ಕೆ ಯಾವುದೇ ವೈದ್ಯಕೀಯ ಕಾರಣವಿಲ್ಲ ಎಂದು ಖಚಿತಪಡಿಸಿಕೊಳ್ಳಿ