ಸ್ತನ್ಯಪಾನದ ಬಗ್ಗೆ ಕೆಲವು ಸಾಮಾನ್ಯ ಮಿಥ್ಯಗಳು ಇಲ್ಲಿವೆ, ಇವುಗಳನ್ನು ಯಾವತ್ತೂ ನಂಬದೆ ಇರಲು ನಾವು ಶಿಫಾರಸು ಮಾಡುತ್ತೇವೆ.
ಮಿಥ್ಯ: ಸ್ತನ್ಯಪಾನ ನೋವುಂಟು ಮಾಡುತ್ತದೆ
ಸತ್ಯ: ಸ್ತನ್ಯಪಾನ ಮಾಡಿಸುವದರಿಂದ ಯಾವುದೇ ತರಹದ ನೋವು ಆಗುವದಿಲ್ಲ. ನಿಮ್ಮ ಮಗು ಸರಿಯಾಗಿ ಲ್ಯಾಚ್ (ಮಗು ಎದೆಹಾಲು ಕುಡಿಯುವಾಗ ಮೊಲೆ ತೊಟ್ಟನ್ನು ಸರಿಯಾಗಿ ಬಾಯಲ್ಲಿ ಇಟ್ಟುಕೊಳ್ಳುವದು) ಮಾಡುತ್ತಿಲ್ಲವಾದರೆ ಅಥವಾ ನೀವು ಸೀಳಿದ ಮೊಲೆತೊಟ್ಟು ಮತ್ತು ಬಾವು ಹೊಂದಿದ್ದರೆ ಮಾತ್ರ ನಿಮಗೆ ನೋವಾಗಬಹುದೇ ಹೊರತು ಮಗುವಿಗೆ ಹಾಲುಣಿಸುವದರಿಂದ ಅಲ್ಲ.
ಮಿಥ್ಯ: ಸ್ತನ್ಯಪಾನ ಹೆಚ್ಚು ಲೈಂಗಿಕ ಬಯಕೆಗೆ ಕಾರಣವಾಗುತ್ತದೆ
ಸತ್ಯ: ಪ್ರತಿ ಮಹಿಳೆಯ ಲೈಂಗಿಕ ಆಸಕ್ತಿ ವಿಭಿನ್ನವಾಗಿದೆ. ಗರ್ಭಾವಸ್ಥೆಯ ನಂತರ ಹಾರ್ಮೋನಿನ ಬದಲಾವಣೆಗಳಿಂದಾಗಿ ಕೆಲವು ಮಹಿಳೆಯರು ಹೆಚ್ಚು ಲೈಂಗಿಕ ಆಸಕ್ತಿ ತೋರಿಸುವರು ಆದರೆ ಇನ್ನು ಕೆಲವರು ಮಹಿಳೆಯರು ತುಂಬಾ ಸಮಯ ತೆಗೆದುಕೊಳ್ಳಬಹುದು. ನೋಯುತ್ತಿರುವ ಮೊಲೆತೊಟ್ಟುಗಳು, ಸ್ತನಗಳಲ್ಲಿ ಬಾವು ಮತ್ತು ಸೀಳು ಮೊಲೆತೊಟ್ಟುಗಳು ಕೆಲವು ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುತ್ತವೆ. ಇದಲ್ಲದೆ, ಇದು ಮಹಿಳೆಯೊಬ್ಬಳ ವೈಯಕ್ತಿಕ ಆಯ್ಕೆಯಾಗಿದೆ.
ಮಿಥ್ಯ: ಚಿಕ್ಕ ಸ್ತನಗಳಿದ್ದಲ್ಲಿ ಎದೆಹಾಲು ಉತ್ಪಾದನೆ ಕಡಿಮೆ.
ಸತ್ಯ: ಎದೆಹಾಲು ಉತ್ಪಾದನೆ ನಿಮ್ಮ ಸ್ತನಗಳ ಗಾತ್ರದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಆರೋಗ್ಯಕರ ಆಹಾರ ಮತ್ತು ಸಮಯಕ್ಕೆ ತಿನ್ನುವುದು ನಿಮಗೆ ಹೆಚ್ಚಿನ ಎದೆಹಾಲು ಉತ್ಪಾದಿಸಲು ಸಹಾಯ ಮಾಡುತ್ತದೆ.
ಮಿಥ್ಯ: ಸ್ತನ್ಯಪಾನ ನಿಮ್ಮ ಸ್ತನಗಳನ್ನು ಜೋಲು ಬೀಳುವಂತೆ ಮಾಡುತ್ತದೆ.
ಸತ್ಯ: ಖಂಡಿತ ಇಲ್ಲ. ನಿಮಗೆ ಮತ್ತು ನಿಮ್ಮ ಮಗುವಿಗೆ ಸ್ತನ್ಯಪಾನವು ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ ಹೊರತು ಯಾವುದೇ ದುಷ್ಪರಿಣಾಮಗಳನ್ನು ತರುವುದಿಲ್ಲ. ಸ್ತನ್ಯಪಾನವು ನಿಮ್ಮ ಸ್ತನಗಳನ್ನು ಜೋಲು ಗೊಳಿಸುತ್ತದೆ ಎಂದು ಹೇಳುವ ಜನರಿಗೆ ಕಿವಿ ಕೊಡಬೇಡಿ. ಅನೇಕ ಗರ್ಭಧಾರಣೆಗಳು, ಧೂಮಪಾನ ಮತ್ತು ವಯಸ್ಸು ಜೋಲು ಸ್ತನಗಳನ್ನು ಉಂಟುಮಾಡಬಹುದು ಆದರೆ ಸ್ತನ್ಯಪಾನಕ್ಕೆ ಮತ್ತು ಜೋಲು ಸ್ತನಗಳಿಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಅಧ್ಯಯನದ ಮೂಲಕ ಸಾಬೀತಾಗಿದೆ.
ಮಿಥ್ಯ: ನಿಮ್ಮ ಮಗುವಿಗೆ ನಿಮ್ಮ ಎದೆಹಾಲಿನಿಂದ ಅಲರ್ಜಿ ಇರಬಹುದು.
ಸತ್ಯ: ನಿಮ್ಮ ಮಗುವಿಗೆ ಯಾವತ್ತೂ ನಿಮ್ಮ ಎದೆಹಾಲಿನಿಂದ ಅಲರ್ಜಿ ಆಗುವುದಿಲ್ಲ ಎಂದು ನಿಮಗೆ ತಿಳಿದಿರಲಿ. ನಿಮ್ಮ ಮಗುವಿಗೆ ಸ್ತನ್ಯಪಾನ ಮಾಡುವಾಗ ನೀವು ತಿಂದಿರುವ ಆಹಾರಕ್ಕೆ ಇದು ಸಂಬಂಧಿಸಿದೆ. ಎದೆಹಾಲಿನಲ್ಲಿ ಇರುವ ಸಂಯೋಜನೆಯು ನಿಮ್ಮ ಶಿಶುಗಳಿಗೆ ಹಾಲು ಇಷ್ಟವಾಗದಂತೆ ಮಾಡಬಹುದು. ಹಾಗಾಗಿ, ಮಗು ಎದೆಹಾಲು ನಿರಾಕರಿಸಿದಾಗೆಲ್ಲ ನೀವು ನಿಮ್ಮ ಹಿಂದಿನ ಊಟದಲ್ಲಿನ ಪದಾರ್ಥಗಳತ್ತ ಗಮನ ಕೊಡಿ ಮತ್ತು ಅದನ್ನು ಮತ್ತೆ ತಿನ್ನುವದನ್ನು ತಪ್ಪಿಸಿ.