Displaying items by tag: Newborn care blogs in Kannada

ನೀವು ಗರ್ಭಿಣಿ ಆಗಿರುವ ವಿಷಯವನ್ನು ಹಂಚಿಕೊಂಡಾಗ ಫೋನ್ ಕರೆಗಳು, ಅತಿಥಿಗಳು, ಸ್ನೇಹಿತರು, ಹಿರಿಯರು ಮತ್ತು ನೆರೆಯವರ ಮೂಲಕ ಸಲಹೆಗಳು ಬರಲು ಶುರು ಆಗುತ್ತದೆ. ಪ್ರತಿ ಸಲಹೆ ಮುಖ್ಯವೆಂದು ತೋರುತ್ತದೆ ಆದರೆ ಯಾವದನ್ನು ಅನುಸರಿಸಬೇಕೆಂಬ ಗೊಂದಲ ನಿಮಗೆ ಇರುತ್ತದೆ. ಈ 9 ತಿಂಗಳಿನ ಗರ್ಭವಾಸ್ಥೆಯ ಸಮಯ ನಿಮ್ಮದು, ನಿಮ್ಮ ಹೊಟ್ಟೆಯಲ್ಲಿನ ಮಗು ಮತ್ತು ಪ್ರತಿ ಕಡೆಯಿಂದ ಬರುತ್ತಿರುವ ಸಲಹೆಗಳದ್ದಾಗಿದೆ. ಈ ಸನ್ನಿವೇಶ ನಿಮ್ಮ ಮಗುವಿನ ಆಗಮನದ ನಂತರ ಹೊಸ ಸಲಹೆಗಳ ಮೂಲಕ ಮುಂದುವರಿಯುತ್ತದೆ. ಅನುಸರಿಸಲು ಸೂಕ್ತವಾದ ಸಲಹೆ ಯಾವುದು ಎಂದು ಖಚಿತಪಡಿಸಿಕೊಳ್ಳಲು ನೀವು ಮತ್ತೊಮ್ಮೆ ಗೊಂದಲಗೊಳಗಾಗುವದರಲ್ಲಿ ಸಂದೇಹವೇ ಇಲ್ಲ. ಇದರಲ್ಲಿ ಕೆಲವು ಸಲಹೆಗಳು ಸಾಕಷ್ಟು ಮಿಥ್ಯಗಳನ್ನು ಒಳಗೊಂಡಿರಬಹುದು.

Published in Kannada Baby Blogs
Tuesday, 25 September 2018 05:26

ನವಜಾತ ಶಿಶು ನಿದ್ರೆ

ನಿಮ್ಮ ಮಗುವಿನ ಆಗಮನದಿಂದ ನೀವು ಸಂತೋಷ, ಉತ್ಸಾಹ ಮತ್ತು ಕೆಲವೊಮ್ಮೆ ಆತಂಕದ ಮಿಶ್ರ ಭಾವನೆಗಳಿಂದ ಕೂಡಿರುವಿರಿ. ಪ್ರಸವದ ಪ್ರಕ್ರಿಯೆಗಳಿಂದ ನೀವು ಮತ್ತು ನಿಮ್ಮ ಮಗು ಸಾಕಷ್ಟು ಸುಸ್ತಾಗಿರುವಿರಿ. ಇದು ಸಾಮಾನ್ಯ. ಆದಷ್ಟು ಅತಿಥಿಗಳನ್ನು ಈ ಸಮಯದಲ್ಲಿ ದೂರವಿಡಿ ಮತ್ತು ಮಗುವಿನ ಅಗತ್ಯಗಳ ಕಡೆಗೆ ಪೂರ್ಣ ಗಮನ ಕೊಡಿ.

Published in Kannada Baby Blogs