Displaying items by tag: ರಕ್ತಹೀನತೆ

ಗರ್ಭಧಾರಣೆಯ ರಕ್ತಹೀನತೆ ವಯಸ್ಕರಲ್ಲಿ ಕಂಡುಬರುವ ರಕ್ತಹೀನತೆಗಳಲ್ಲಿ ಒಂದಾಗಿದೆ, ಇದು ಕೆಲವು ಬಾರಿ ಕೆಲವು ಕಾಯಿಲೆಯಿಂದಾಗಿ ಕಂಡುಬರುವುದಿಲ್ಲ.  ಗರ್ಭಾವಸ್ಥೆಯಲ್ಲಿ ರಕ್ತದ ಪರಿಮಾಣಕ್ಕೆ ಏನಾಗುತ್ತದೆ ಎಂಬುದನ್ನು ವಿವರಿಸಲು, ಒಂದು ಚೆಂಬು ಅರ್ಧ ನೀರಿನಿಂದ ತುಂಬಿರುವುದನ್ನು ಊಹಿಸಿ ಮತ್ತು 12 ಗ್ರಾಂಗಳಷ್ಟು ಕೆಂಪು ಬಣ್ಣವನ್ನು ಸೇರಿಸಿದೆ ಎಂದು ಭಾವಿಸಿ. ಈಗ ನೀವು 50% ಹೆಚ್ಚಿನ ನೀರನ್ನು ಬೀಕರ್ ಗೆ  ಸೇರಿಸಿದಾಗ ಮತ್ತು ಅದರ ಜೊತೆ ಕೇವಲ 3 ಗ್ರಾಂ ಕೆಂಪು ಬಣ್ಣವನ್ನು ಸೇರಿಸಿದಾಗ, ದ್ರಾವಕ ದುರ್ಬಲ ಅಥವಾ ತೆಳುವಾಗುತ್ತದ. ಅದೇ ತರಹ ಗರ್ಭಾವಸ್ಥೆಯಲ್ಲಿ ಸಂಭವಿಸುತ್ತದೆ. ಪ್ಲಾಸ್ಮಾ ಪ್ರಮಾಣವು 50% ಹೆಚ್ಚಾಗಿದ್ದರೂ, ಕೆಂಪು ಜೀವಕೋಶದ ದ್ರವ್ಯರಾಶಿಯು 15 ರಿಂದ 25% ರಷ್ಟು ಮಾತ್ರ ಹೆಚ್ಚಾಗುತ್ತದೆ.