Displaying items by tag: ಗರ್ಭಾವಸ್ಥೆಯಲ್ಲಿ ಆಹಾರ ಕಡುಬಯಕೆಗಳು ಕನ್ನಡ ಬ್ಲಾಗ್

ಗರ್ಭಿಣಿಯರಿಗೆ ಆಹಾರ ಕಡುಬಯಕೆ ಏಕೆ?

ನನಗೆ ಇನ್ನೂ ನೆನಪಿದೆ ನನ್ನ ಸ್ನೇಹಿತೆಯೊಬ್ಬಳು ಗರ್ಭಿಣಿಯಾಗಿದ್ದಾಗ ಮತ್ತು ಅಮೇರಿಕಾದ ದೂರದ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ ತನ್ನ 6 ನೇ ತಿಂಗಳಿನಲ್ಲಿ ಒಂದು ದಿನ ಬೆಳಿಗ್ಗೆ ಮಸಾಲಾ ದೋಸಕ್ಕೆ ಹಂಬಲಿಸಿದ್ದಳು. ಭಾರತೀಯ ರೆಸ್ಟೋರೆಂಟ್ಗಳು ಬಹಳ ಸಾಮಾನ್ಯವಾಗಿ ಸಿಗದೇ ಇರುವ ಪ್ರದೇಶ ಮತ್ತು ಅವಳು ಆಕೆಯ ಪತಿಯನ್ನು 120 ಮೈಲುಗಳಷ್ಟು ದೂರದ ಭಾರತೀಯ ರೆಸ್ಟೋರೆಂಟ್ ಗೆ  ಹೋಗುವಂತೆ ಮಾಡಿದಳು. ಇದು ಕೇವಲ ಒಂದು ಕಥೆ, ಗರ್ಭಿಣಿಯರಿಗೆ ಸಿಹಿ ತಿನಿಸುಗಳಿಗಾಗಿ ಕಡುಬಯಕೆ, ಬಿಸಿ ಮತ್ತು ಮಸಾಲೆಯುಕ್ತ ವಸ್ತುಗಳಿಗೆ ನಾನು ಕೇಳುವ ಅಂತಹ ಕಥೆಗಳು ಸಾಕಷ್ಟು ಇವೆ. ಕೆಲವು ಮಹಿಳೆಯರಿಗೆ ಸೀಮೆಸುಣ್ಣ, ಮಣ್ಣು, ಮರದಂತಹ ಆಹಾರೇತರ ವಸ್ತುಗಳಿಗೆ ಕಡುಬಯಕೆ ಇದೆ. ಇದನ್ನು ಪೈಕಾ (Pica) ಎಂದು ಕರೆಯಲಾಗುತ್ತದೆ.