Kannada Baby Blogs

Kannada Baby Blogs (20)

ಮೊದಲ ಎದೆ ಹಾಲಿನ ಪ್ರಾಮುಖ್ಯತೆ ಕುರಿತು ನೀವು ವೈದ್ಯರಿಂದ, ಮನೆಯಲ್ಲಿನ ಹಿರಿಯರಿಂದ ಅಥವಾ ದಾಯಾದಿಗಳಿಂದ ಕೇಳಿಯೇ ಇರುತ್ತೀರಿ. ಇದು ತೆಳುವಾದ ಹಳದಿ ಹಾಲು ಆಗಿದ್ದು, ಅದು ಪ್ರಸವದ ನಂತರ ಉತ್ಪತ್ತಿಯಾಗುತ್ತದೆ. ಇದು ಎರಡು ಟೇಬಲ್ ಸ್ಪೂನ್ ಗಳಿಗಿಂತ ಜಾಸ್ತಿ ಇರುವುದಿಲ್ಲ, ಆದರೆ, ಇದು ತುಂಬಾ ಪೌಷ್ಟಿಕಾಂಶದ ಹಾಲು ಮತ್ತು ಮಗುವಿಗೆ ಆಜೀವ ಪೌಷ್ಟಿಕಾಂಶವನ್ನು ನೀಡುತ್ತದೆ. ಕೊಲೊಸ್ಟ್ರಮ್, ಕೆಲವು ಮಹಿಳೆಯರಲ್ಲಿ ಪ್ರಸವದ ಮುಂಚೆಯೇ, ಅಂದರೆ, ಗರ್ಭಾವಸ್ಥೆಯ ಕೊನೆಯ ತಿಂಗಳುಗಳಲ್ಲಿ ಉತ್ಪತ್ತಿ ಆಗಿರುವ ವರದಿಗಳು ಇದೆ.

MMR ಸಂಕ್ಷೇಪಣ ಮಂಪ್ಸ್, ಮೀಸಲ್ಸ್ (ದಡಾರ), ಮತ್ತು ರುಬೆಲ್ಲಾ ಕಾಯಿಲೆಗಳನ್ನು ಪ್ರತಿನಿಧಿಸುತ್ತದೆ. ಮೀಸಲ್ಸ್, ಮಂಪ್ಸ್  ಮತ್ತು ರುಬೆಲ್ಲಾ ವೈರಸ್ ನಿಂದ ಹರಡುವ ರೋಗಗಳು ಮತ್ತು ಈ ಕಾಯಿಲೆಗಳಿಗೆ ಲಸಿಕೆಗಳನ್ನು ಕಂಡುಹಿಡಿಯುವುದಕ್ಕೆ ಮುಂಚೆಯೇ ಅವು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುತ್ತಿದ್ದವು. ಈ ಕಾಯಿಲೆಗಳು ಗಂಭೀರ ಪರಿಣಾಮ ಬೀರುತ್ತವೆ. ಇತ್ತೀಚೆಗೆ ಮೀಸಲ್ಸ್ ಮತ್ತು ರುಬೆಲ್ಲಾ ವಿರುದ್ಧ ಭಾರತವು ಒಂದು ದೊಡ್ಡ ಜಾಗೃತಿ ಪ್ರಚಾರವನ್ನು ಪ್ರಾರಂಭಿಸಿದೆ.

ಈ ಮುಂಚೆ ನಾನು ರೋಗ ನಿರೋಧಕ ಲಸಿಕೆಗಳ ಪ್ರಾಮುಖ್ಯತೆ ಕುರಿತು  ಒಂದು ಬ್ಲಾಗ್ ಬರೆದಿದ್ದೇನೆ. ಟಿಬಿ ಮೆನಿಂಜೈಟಿಸ್ (TB Meningitis) ಸೇರಿದಂತೆ ಮಕ್ಕಳಲ್ಲಿ ಪ್ರಸಾರವಾಗುವ ಟಿಬಿ ರೋಗಗಳ ವಿರುದ್ಧ ಉತ್ತಮ ರಕ್ಷಣೆ ನೀಡಲು ಬಿ.ಸಿ.ಜಿ ಲಸಿಕೆ ಸಾಮಾನ್ಯವಾಗಿ ಮಕ್ಕಳಿಗೆ ನೀಡಲಾಗುತ್ತದೆ.

Friday, 31 August 2018 11:07

ಸ್ತನಪಾನದ ಆರಂಭ

Written by

ಸ್ತನಪಾನದ ಶೀಘ್ರ ಆರಂಭ, ಮಗುವಿನ ಜನನದ ನಂತರದ ಮೊದಲ 6 ತಿಂಗಳುಗಳವರೆಗೆ ವಿಶೇಷವಾದ ಹಾಲುಣಿಸುವಿಕೆ, 6 ತಿಂಗಳ ವಯಸ್ಸಿನ ನಂತರ ಸಾಕಷ್ಟು ಪೂರಕ ಆಹಾರಗಳೊಂದಿಗೆ ಎರಡು ವರ್ಷಗಳವರೆಗೆ ಮತ್ತು ಅದಕ್ಕಿಂತಲೂ ಹೆಚ್ಚಿನವರೆಗೆ ಸ್ತನಪಾನ ನೀಡುವುದು ಸೂಕ್ತ ಪೋಷಣೆಯ ಆಹಾರ ಕಾರ್ಯವಿಧಾನವಾಗಿದೆ.

ಜನರು ವ್ಯಾಕ್ಸಿನೇಷನ್/ಲಸಿಕೆಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿರುತ್ತಾರೆ. ನನ್ನ ರೋಗಿಗಳಲ್ಲಿ ಒಬ್ಬರು ನನ್ನನ್ನು ಕೇಳಿದರು - ಡಾಕ್ಟರ್, ನನ್ನ ಮಗುವಿಗೆ ವ್ಯಾಕ್ಸಿನೇಷನ್ ಹೆಸರಿನಲ್ಲಿ  ಚುಚ್ಚುಮದ್ದನ್ನು ಏಕೆ ಪಡೆಯಬೇಕು? ಅವಳು ಆರೋಗ್ಯಕರವಾಗಿದ್ದಾಳೆ. ನಾನು ನನ್ನ ರೋಗಿಗಳಿಗೆ ಹೇಳಲು ಇಷ್ಟಪಡುತ್ತೇನೆ - ವ್ಯಾಕ್ಸಿನೇಷನ್ ವಿಮೆ ಪಾಲಿಸಿ ಇದ್ದಂತೆ. ಸಂಭವಿಸಬಹುದಾದ ಯಾವುದೇ ಅನಿರೀಕ್ಷಿತ ಅಪಘಾತಗಳಿಂದ ಅಥವಾ ಅನಾರೋಗ್ಯದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ವಿಮೆಯನ್ನು ಖರೀದಿಸಿದಂತೆ.

Page 2 of 2