Thursday, 20 September 2018 04:50

ಮಗುವಿಗೆ ನಾನು ಯಾವಾಗಿನಿಂದ ಹಸುವಿನ ಹಾಲನ್ನು ನೀಡಬಹುದು?

Written by
Rate this item
(0 votes)

ಸಾಮಾನ್ಯವಾಗಿ ಪೋಷಕರು ಫಾರ್ಮುಲಾ ಹಾಲಿನ ಬದಲಿಗೆ ತಮ್ಮ ಮಗುವಿಗೆ ಹಸುವಿನ ಹಾಲನ್ನು ನೀಡುವದರ ಬಗೆಗೆ ಉತ್ಸುಕರಾಗಿರುತ್ತಾರೆ. ಇದು ಕೆಳಗಿನ ಕಾರಣಗಳಿಂದ ಆಗಿರಬಹುದು;

  • ಫಾರ್ಮುಲಾ ಹಾಲು ದುಬಾರಿಯಾಗಿದೆ. ಮತ್ತೊಂದೆಡೆ, ಹಸುವಿನ ಹಾಲು ಇಡೀ ಕುಟುಂಬಕ್ಕೆ ಖರೀದಿಸಲ್ಪಡುತ್ತದೆ ಮತ್ತು ಇದು ಅಗ್ಗವಾಗಿದೆ.
  • ಪ್ರಯಾಣದ ಸಮಯದಲ್ಲಿ ಅಥವಾ ರಾತ್ರಿಯ ಸಮಯದಲ್ಲಿ ಮಗುವಿಗೆ ಹಸಿವಾದಾಗ ಫಾರ್ಮುಲಾ ಹಾಲನ್ನು ತಯಾರಿಸುವುದು ಕೊಂಚ ಕಷ್ಟಕರವಾಗಬಹುದು.

 

ಅನೇಕ ಶಿಶುಗಳಿಗೆ ಹಸುವಿನ ಹಾಲಿನಿಂದ ತೊಂದರೆಗಳಿವೆ. ಒಂದು ವರ್ಷದ ಮೊದಲೆಯೇ ಹಸುವಿನ ಹಾಲು ನೀಡಿದ ಶಿಶುಗಳಲ್ಲಿ ರಕ್ತಹೀನತೆ, ಅತಿಸಾರ ಅಥವಾ ವಾಂತಿ, ಮತ್ತು ಅಲರ್ಜಿಯ ಪ್ರತಿಕ್ರಿಯೆಯನ್ನು ಕಾಣಬಹುದು. ಹಸುವಿನ ಹಾಲಿನ ಪ್ರೋಟೀನ್ ಅಂಶವು ಹೆಚ್ಚಿನ ಮಟ್ಟದ್ದಾಗಿರುತ್ತದೆ ಮತ್ತು ಮಗುವಿನ ಅಪಕ್ವವಾದ ಮತ್ತು ಅಭಿವೃದ್ಧಿ ಹೊಂದದ ಮೂತ್ರಪಿಂಡಗಳಿಂದ ಜೀರ್ಣಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಹಸುವಿನ ಹಾಲಿನಲ್ಲಿರುವ ಅತಿಯಾದ ಪ್ರೋಟೀನ್ ಮಗುವಿನ ಮೂತ್ರಪಿಂಡದಲ್ಲಿ ಅತಿಯಾದ ಹೊರೆಯಾಗಬಹುದು. ಹಸುವಿನ ಹಾಲಿನಲ್ಲಿ C, E ಮತ್ತು ತಾಮ್ರದ ವಿಟಮಿನ್ ಗಳ ಕೊರತೆಯಿದೆ. ಹಸುವಿನ ಹಾಲಿನಲ್ಲಿ ಕಬ್ಬಿಣಾಂಶ ತುಂಬಾ ಕಡಿಮೆ ಇರುತ್ತದೆ ಮತ್ತು ಈ ಹಾಲಿನಲ್ಲಿರುವ ಕ್ಯಾಲ್ಸಿಯಂ ಕಬ್ಬಿಣಾಂಶದ ಹೀರಿಕೊಳ್ಳುವಿಕೆಯನ್ನು ಪ್ರತಿಬಂಧಿಸುತ್ತದೆ. ಇದನ್ನು ಮಗುವಿನಿಂದ ಜೀರ್ಣಿಸಿಕೊಳ್ಳಲು ಸಹ ಕಷ್ಟ, ಮತ್ತು ಕೆಲವೊಮ್ಮೆ ಶಿಶುಗಳಲ್ಲಿ ಕರುಳಿನ ರಕ್ತಸ್ರಾವವನ್ನು ಉಂಟುಮಾಡಬಹುದು ಇದು ಮಗುವಿನಲ್ಲಿ ರಕ್ತಹೀನತೆಗೆ ಕಾರಣವಾಗಬಹುದು. 

 

ಮಗುವಿಗೆ ಮೊದಲ ವರ್ಷದಲ್ಲಿ ಸಂಪೂರ್ಣವಾಗಿ ಎದೆಹಾಲು ನೀಡುತ್ತಿದ್ದರೆ ಯಾವುದೇ ಹಾಲಿನ ಪೂರಕಗಳು/ಸಪ್ಲೀಮೆಂಟ್ಸ್ ಅನವಶ್ಯಕ. ಮಗುವಿನ ಒಂದು ವರ್ಷದ ನಂತರ, ಸಂಪೂರ್ಣವಾಗಿ ಹಸುವಿನ ಹಾಲು ನೀಡಬಹುದು ಮತ್ತು ಅದರ ಜೊತೆ ಮಗುವಿಗೆ ಘನ ಆಹಾರಗಳ (ಧಾನ್ಯಗಳು, ತರಕಾರಿಗಳು, ಹಣ್ಣುಗಳು) ಸಮತೋಲಿತ ಆಹಾರವನ್ನು ನೀಡುವದನ್ನು ಮರೆಯಬೇಡಿ. ಆದರೆ ದಿನಕ್ಕೆ ಒಂದು ಗ್ಲಾಸ್ ಅಥವಾ ಒಂದೂವರೆ ಗ್ಲಾಸ್ ನಷ್ಟೇ ಹಾಲು ನೀಡುವದನ್ನು ಮೀತಿಗೊಳಿಸಿ. ಅದಕ್ಕಿಂತ ಹೆಚ್ಚು ಹಾಲು ಹೆಚ್ಚು ಕ್ಯಾಲೊರಿಗಳನ್ನು ಒದಗಿಸಬಹುದು ಮತ್ತು ಮಗುವಿನಲ್ಲಿ ಇತರ ಆಹಾರಕ್ಕಾಗಿ ಹಸಿವನ್ನು ಕಡಿಮೆ ಮಾಡಬಹುದು. ನಿಮ್ಮ ಮಗು ಇನ್ನೂ ಘನ ಆಹಾರಗಳನ್ನು ಸೇವಿಸುತ್ತಿಲ್ಲವಾದರೆ, ನಿಮ್ಮ ಶಿಶುವೈದ್ಯರ ಜೊತೆ ಮಗುವಿನ ಅತ್ಯುತ್ತಮ ಪೌಷ್ಟಿಕಾಂಶದ ಬಗ್ಗೆ ಚರ್ಚಿಸಿ.

 

ಅಂಬೆಗಾಲಿಡುತ್ತಿರುವ ಮಕ್ಕಳ ಆಹಾರದಲ್ಲಿ ಹೆಚ್ಚಿನ ಕೊಬ್ಬಿನಾಂಶದ ಅಗತ್ಯವಿರುತ್ತದೆ, ಇದರಿಂದಾಗಿ ಒಂದು ವರ್ಷದ ನಂತರ ಹೆಚ್ಚಿನ ಶಿಶುಗಳಿಗೆ ಜೀವಸತ್ವ D ಹಾಲನ್ನು ಶಿಫಾರಸು ಮಾಡಲಾಗುತ್ತದೆ. ಆದರೆ, ಯಾವಾಗಲೂ ಮಗುವಿಗೆ ಪಾಶ್ಚರೀಕರಿಸಿದ ಹಾಲು (ಹಾಲನ್ನು ಅತ್ಯಧಿಕ ಉಷ್ಣತೆಯಲ್ಲಿ ಕಾಯಿಸಿ ತಕ್ಷಣವೇ ತಣಿಸುವ, ಹಾಲನ್ನು ಸಂರಕ್ಷಿಸುವ ಮತ್ತು ಅದರಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಪ್ರಕ್ರಿಯೆಗೆ ಪಾಶ್ಚರೀಕರಣ ಎನ್ನುವರು) ನೀಡಿ. ಒಂದು ಗ್ಲಾಸ್ ಹಸುವಿನ ಹಾಲು ಮಗುವಿಗೆ (1 ರಿಂದ 3 ವರ್ಷ ವಯಸ್ಸಿನ ಮಕ್ಕಳು) ಸುಮಾರು 40% ರಷ್ಟು ಶಿಫಾರಸು ಮಾಡಲಾದ ಕ್ಯಾಲ್ಸಿಯಂ ಮತ್ತು 20% ರಷ್ಟು ಶಿಫಾರಸು ಮಾಡಿದ ವಿಟಮಿನ್ D ಒದಗಿಸುತ್ತದೆ. ಹಾಲು ನಿಮ್ಮ ಮಗುವಿಗೆ ಬೆಳೆಯಲು ಸಹಾಯ ಮಾಡುವ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ನಿಮ್ಮ ಮಗುವಿಗೆ ದಿನವಿಡೀ ಅಗತ್ಯವಿರುವ ಶಕ್ತಿಯನ್ನು ನೀಡುವ ಕಾರ್ಬೋಹೈಡ್ರೇಟ್ಗಳನ್ನು ಸಹ ಒಳಗೊಂಡಿದೆ. ಅಧಿಕ ಪ್ರಮಾಣದ ಕ್ಯಾಲ್ಸಿಯಂ ಹೊಂದಿರುವ ಮಗುವಿಗೆ ಬಲವಾದ ಮೂಳೆಗಳು, ಆರೋಗ್ಯಕರ ರಕ್ತದೊತ್ತಡ, ಮತ್ತು ಆರೋಗ್ಯಕರ ಹೃದಯ ಇರುತ್ತದೆ.

 

ಹಾಗಾಗಿ, ನೀವು ಮಗುವಿಗೆ ಒಂದು ವರ್ಷ ಆದ ಮೇಲೆ ಮೊದಲಿಗೆ ಒಂದು ಗ್ಲಾಸ್ ಮತ್ತು ನಿಧಾನವಾಗಿ ಸಮಯದ ಕಳೆದ ಹಾಗೆಲ್ಲ ಒಂದೂವರೆ ಗ್ಲಾಸ್ಸ್ ನಷ್ಟು ಹಾಲನ್ನು ನೀಡುವುದನ್ನು ಶುರು ಮಾಡಿ. ಯಾವುದೇ ಹೊಸ ಆಹಾರವನ್ನು ಪರಿಚಯಿಸಿದ ನಂತರದ ಕೆಲವು ದಿನಗಳವರೆಗೆ ಸೂಕ್ಷ್ಮತೆಯ ಅಥವಾ ಯಾವುದೇ ಅಲರ್ಜಿಯ ಸಂಕೇತಗಳಿಗಾಗಿ ಮಗುವಿನ ಮೇಲೆ ನಿಗಾಹ ಇಡಿ. ಅತಿಸಾರ, ಉರಿಯೂತ, ಕಿರಿಕಿರಿ, ವಾಂತಿ ಮತ್ತು ಹೊಟ್ಟೆ ನೋವುಗಳಂತಹ ರೋಗಲಕ್ಷಣಗಳ ಕಡೆ ಗಮನ ಕೊಡಿ. ನಿಮ್ಮ ಶಿಶುವಿನಲ್ಲಿ ಈ ಲಕ್ಷಣಗಳಲ್ಲಿ ಯಾವುದಾದರೂ ಒಂದನ್ನು ಗಮನಿಸಿದರೆ ನಿಮ್ಮ ಶಿಶುವೈದ್ಯರನ್ನು ನೋಡಿ.

Read 4947 times Last modified on Thursday, 20 September 2018 05:04
Dr Padma

Dr Padma is a Family care physician and is the Founder and CEO of MedHealthTV.

www.medhealthtv.com

Leave a comment

Make sure you enter all the required information, indicated by an asterisk (*). HTML code is not allowed.