Friday, 31 August 2018 08:15

ಗರ್ಭಾವಸ್ಥೆಯಲ್ಲಿ ಧೂಮಪಾನ

Written by

ಧೂಮಪಾನವು ಗರ್ಭವತಿ ಮಹಿಳೆಯರಿಗೆ ಮತ್ತು ಅವರ ಮಗುವಿಗೆ ಹಾನಿಕಾರಕವಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆ ಧೂಮಪಾನ ಮಾಡುವಾಗ, ಭ್ರೂಣವು ಅನೇಕ ಹಾನಿಕಾರಕ ರಾಸಾಯನಿಕಗಳಿಗೆ ಒಡ್ಡುತ್ತದೆ. ನಿಕೋಟಿನ್ ಗರ್ಭಿಣಿ ಮಹಿಳೆಯಿಂದ ಭ್ರೂಣಕ್ಕೆ ಹಾದುಹೋಗಬಹುದಾದ ಅನೇಕ ವಿಷಕಾರಿ ರಾಸಾಯನಿಕಗಳಲ್ಲಿ ಒಂದಾಗಿದೆ. ನಿಕೋಟಿನ್ ನ ಪರಿಣಾಮಗಳಲ್ಲಿ ಒಂದು ರಕ್ತನಾಳಗಳ ಕುಗ್ಗುವಿಕೆಯಾಗಿದೆ.

 

ರಕ್ತನಾಳಗಳ ಕುಗ್ಗುವಿಕೆಯಿಂದ ಭ್ರೂಣಕ್ಕೆ ಕಡಿಮೆ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆ ಉಂಟಾಗುತ್ತದೆ. ಇದರ ಪ್ರತಿಯಾಗಿ, ಮಗುವಿನ ಬೆಳವಣಿಗೆಯಲ್ಲಿ ಕುಂಠಿತವನ್ನು ಉಂಟುಮಾಡುತ್ತದೆ. ನಿಕೋಟಿನ್ ಭ್ರೂಣದ ಮೆದುಳು ಮತ್ತು ಶ್ವಾಸಕೋಶಗಳನ್ನು ಕೂಡ ಹಾನಿಗೊಳಿಸುತ್ತದೆ. ಈ ಹಾನಿ ಶಾಶ್ವತವಾಗಿರುತ್ತದೆ.

 

ಗರ್ಭಧಾರಣೆಯ ಸಮಯದಲ್ಲಿ ಧೂಮಪಾನ ಮಾಡುವುದರಿಂದ ಪ್ರಸವಪೂರ್ವ ಜನನ  ಅಂದರೆ ಶಿಶುವಿನ ಜನನ ಗರ್ಭಧಾರಣೆಯ 37 ವಾರಗಳ ಮುಂಚೆಯೇ ಸಂಭವಿಸುವ ಸಾಧ್ಯತೆಗಳು ಹೆಚ್ಚುತ್ತ್ತವೆ. ಪ್ರಸವ-ಪೂರ್ವ ಶಿಶುಗಳು ಸಂಪೂರ್ಣವಾಗಿ ಅಭಿವೃದ್ಧಿಯಾಗುವ ಅವಕಾಶಗಳು ತುಂಬಾ ಕಡಿಮೆಯಾಗಿದೆ. ದೂಮಪಾನ ಮಾಡದೆ ಇರುವ ತಾಯಿಯಂದರಿಗೆ ಜನಿಸಿದ ಶಿಶುಗಳಿಗಿಂತ ಅವು ಗಾತ್ರದಲ್ಲಿ ಚಿಕ್ಕದಾಗಬಹುದು, ಮತ್ತು ಅವುಗಳು ಕೊಲಿಕ್ (ಶಿಶುಗಳು ಅನಿಯಂತ್ರಿತವಾಗಿ ಅಳುವುದು) ಹೊಂದಿರುವ ಸಾಧ್ಯತೆಯಿದೆ. ಈ ಮಕ್ಕಳು ತಮ್ಮ ಬಾಲ್ಯದಲ್ಲಿಯೆ ಆಸ್ತಮಾ ಮತ್ತು ಸ್ಥೂಲಕಾಯವನ್ನು ಬೆಳೆಸಿಕೊಳ್ಳುವ ಸಾಧ್ಯತೆಯಿದೆ.

 

ಸೆಕೆಂಡ್-ಹ್ಯಾಂಡ್ ಸ್ಮೋಕ್ (ಧೂಮಪಾನ ಮಾಡುವ ಜನರಿಂದ ಬರುವ ಹೋಗೆ ಮತ್ತು ವಾಹನ ಮಾಲಿನ್ಯದ ಹೊಗೆಯನ್ನು ಉಸಿರಾಡುವುದು) ಕಡಿಮೆ ತೂಕದ ಶಿಶುಗಳ ಜನ್ಮದ ಪ್ರಮಾಣದಲ್ಲಿ 20% ನಷ್ಟು ಅಪಾಯವನ್ನು ಹೆಚ್ಚಿಸುವ ಸಾಧ್ಯತೆಗಳು ಇದೆ. ಸೆಕೆಂಡ್-ಹ್ಯಾಂಡ್ ಸ್ಮೋಕ್ ನ ಸಂಪರ್ಕದಲ್ಲಿ ಬರುವ ಶಿಶುಗಳಿಗೆ ಆಸ್ತಮಾ ಮತ್ತು ಕಿವಿ ಸೋಂಕುಗಳು ಸಂಭವಿಸಬಹುದು.

 

ನಿಮ್ಮ ಮಗುವಿನ ಆರೋಗ್ಯಕ್ಕಾಗಿ ನಿಮ್ಮ ಗರ್ಭಾವಸ್ಥೆಯಲ್ಲಿ ಧೂಮಪಾನವನ್ನು ತಪ್ಪಿಸಿ ಮತ್ತು ಧೂಮಪಾನ ಮಾಡುವ ಜನರಿಂದ ದೂರವಿರಿ

Last modified on Friday, 31 August 2018 08:35
Dr Padma

Dr Padma is a Family care physician and is the Founder and CEO of MedHealthTV.

www.medhealthtv.com

Leave a comment

Make sure you enter all the required information, indicated by an asterisk (*). HTML code is not allowed.