ಮೊದಲ ಎದೆ ಹಾಲಿನ ಪ್ರಾಮುಖ್ಯತೆ ಕುರಿತು ನೀವು ವೈದ್ಯರಿಂದ, ಮನೆಯಲ್ಲಿನ ಹಿರಿಯರಿಂದ ಅಥವಾ ದಾಯಾದಿಗಳಿಂದ ಕೇಳಿಯೇ ಇರುತ್ತೀರಿ. ಇದು ತೆಳುವಾದ ಹಳದಿ ಹಾಲು ಆಗಿದ್ದು, ಅದು ಪ್ರಸವದ ನಂತರ ಉತ್ಪತ್ತಿಯಾಗುತ್ತದೆ. ಇದು ಎರಡು ಟೇಬಲ್ ಸ್ಪೂನ್ ಗಳಿಗಿಂತ ಜಾಸ್ತಿ ಇರುವುದಿಲ್ಲ, ಆದರೆ, ಇದು ತುಂಬಾ ಪೌಷ್ಟಿಕಾಂಶದ ಹಾಲು ಮತ್ತು ಮಗುವಿಗೆ ಆಜೀವ ಪೌಷ್ಟಿಕಾಂಶವನ್ನು ನೀಡುತ್ತದೆ. ಕೊಲೊಸ್ಟ್ರಮ್, ಕೆಲವು ಮಹಿಳೆಯರಲ್ಲಿ ಪ್ರಸವದ ಮುಂಚೆಯೇ, ಅಂದರೆ, ಗರ್ಭಾವಸ್ಥೆಯ ಕೊನೆಯ ತಿಂಗಳುಗಳಲ್ಲಿ ಉತ್ಪತ್ತಿ ಆಗಿರುವ ವರದಿಗಳು ಇದೆ.