ನಿಮ್ಮ ಮಗುವಿಗೆ ಎದೆಹಾಲು ಅತ್ಯುತ್ತಮವಾಗಿದೆ - ಇದಕ್ಕಿಂತ ದೊಡ್ಡ ಸತ್ಯವಿಲ್ಲ. ನೀವು ಸ್ವಲ್ಪ ಹೊತ್ತಿನವರೆಗೂ ಎದೆಹಾಲು ನೀಡಿದರು ಕೂಡ ಅದು ನಿಮ್ಮ ಮಗುವಿಗೆ ಪ್ರಯೋಜನಕಾರಿಯಾಗಿದೆ. ಆದರೆ ನೀವು ಹೆಚ್ಚು ಎದೆಹಾಲು ನೀಡಿದಷ್ಟು ನಿಮ್ಮ ಮಗು ಹೆಚ್ಚು ರಕ್ಷಣೆ ಪಡೆದುಕೊಳ್ಳುತ್ತದೆ. ಮಗುವಿಗೆ ಪೌಷ್ಠಿಕಾಂಶವಾಗಿ ಎದೆಹಾಲು ಅತ್ಯಂತ ಉತ್ತಮ ಆಯ್ಕೆಯಾಗಿದೆ.
ನಿಮ್ಮ ಮಗುವಿಗೆ ಸ್ತನ್ಯಪಾನ ಮಾಡಿಸಬೇಕಾ ಅಥವಾ ಫಾರ್ಮುಲಾ-ಫೀಡ್/ಫಾರ್ಮುಲಾ-ಹಾಲು ನೀಡಬೇಕಾ ಎನ್ನವುದು ನೀವು ತೆಗೆದುಕೊಳ್ಳಬೇಕಾದ ದೊಡ್ಡ ನಿರ್ಧಾರವಾಗಿರಬಹುದು. ಕೆಲವು ತಾಯಂದಿರು ಎದೆ ಹಾಲು ಉತ್ಪಾದಿಸಲು ಅದೃಷ್ಟ ಹೊಂದದೆ ಇರಬಹುದು ಆದ್ದರಿಂದ ಅವರು ತಮ್ಮ ಮಗುವಿಗೆ ಫಾರ್ಮುಲಾ ಹಾಲು ಪೋಷಿಸುವ ಹೊರತು ಬೇರೆ ಆಯ್ಕೆ ಹೊಂದಿಲ್ಲ.