ಗರ್ಭಾವಸ್ಥೆಯಲ್ಲಿ, ನಿಮ್ಮ ರಕ್ತದ ಪ್ರಮಾಣ ಶೇ 40 ರಷ್ಟು ಹೆಚ್ಚಾಗುತ್ತದೆ. ಇದು ನಿಮ್ಮ ಸ್ತನಗಳ ಗಾತ್ರ ಹೆಚ್ಚಿಸುವದಲ್ಲದೇ ಲೈಂಗಿಕ ಪ್ರಚೋದನೆಯ ಭಾಗಗಳಲ್ಲಿ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಇದರ ಅರ್ಥ, ಸಂಭೋಗ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿ ಉಂಟಾಗುತ್ತದೆ.
ಮೊದಲ ಕೆಲವು ತಿಂಗಳುಗಳಲ್ಲಿ ವಾಕರಿಕೆ, ವಾಂತಿ ಮತ್ತು ಬಳಲಿಕೆ ಮೊದಲಾದವು ನಿಮಗೆ ತೊಂದರೆ ನೀಡುತ್ತಿರುವಾಗ ಸಂಭೋಗ ಕ್ರಿಯೆ ನಿಮ್ಮ ಮನಸ್ಸಿನಲ್ಲಿ ಕೊನೆಯ ಆಯ್ಕೆಯಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಲೈಂಗಿಕ ಆಸಕ್ತಿ ಸಾಮಾನ್ಯವಾಗಿ ಮಹಿಳೆಯಲ್ಲಿ ಏರಿಳಿತವಾಗುತ್ತದೆ - ಮೊದಲ ತ್ರೈಮಾಸಿಕ ಅವಧಿಯಲ್ಲಿ ಕಡಿಮೆ, ಎರಡನೇ ತ್ರೈಮಾಸಿಕದಲ್ಲಿ ಗರಿಷ್ಠ ಮತ್ತು ಮೂರನೇ ತ್ರೈಮಾಸಿಕದಲ್ಲಿ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ, ವಿಶೇಷವಾಗಿ ನೀವು ಪ್ರಸವದ ಸಮಯಕ್ಕೆ ಹತ್ತಿರ ಇರುವಾಗ ನಿಮ್ಮ ಗಾತ್ರ, ಪ್ರಸವದ ನೋವು ಮತ್ತು ಪ್ರಸವದ ಬಗೆಗಿನ ಆತಂಕ ಇದಕ್ಕೆ ಕಾರಣವಾಗಿದೆ.
ಕೆಲವು ಮಹಿಳೆಯರು ಲೈಂಗಿಕ ಕ್ರಿಯೆಯ ನಂತರ ಸ್ವಲ್ಪ ರಕ್ತಸ್ರಾವ ಮತ್ತು ಸೆಳೆತವನ್ನು (Cramps) ಅನುಭವಿಸುತ್ತಾರೆ. ವೀರ್ಯದಲ್ಲಿನ ಪ್ರೋಸ್ಟೆಗ್ಲಾನ್ದಿನ್ ಕಾರಣದಿಂದ ಆಗುವ ಗರ್ಭಾಶಯದ ಕುಗ್ಗುವಿಕೆ ಮತ್ತು ಹಿಗ್ಗುವಿಕೆ ಪರಿಣಾಮವಾಗಿ ನೀವು ಸೆಳೆತವನ್ನು ಅನುಭವಿಸಬಹುದು.
ಮೊಲೆತೊಟ್ಟುಗಳ ಉತ್ತೇಜನ ಗರ್ಭಾಶಯದ ಹಿಗ್ಗುವಿಕೆ-ಕುಗ್ಗುವಿಕೆಗೆ ಕಾರಣವಾಗಿದೆ. ಇದು ಸಾಮಾನ್ಯವಾಗಿ ಕೆಲವು ನಿಮಿಷಗಳಲ್ಲಿ ಕಡಿಮೆ ಆಗುತ್ತದೆ, ಆದರೆ ಸೆಳೆತ ಕಡಿಮೆಯಾಗದೇ ಹೆಚ್ಚಾಗುತ್ತ ಹೋದಲ್ಲಿ ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಯೋನಿಯೊಳಗೆ ದುರ್ಬಲವಾದ ಸೂಕ್ಷ್ಮ ರಕ್ತನಾಳಗಳ ಛಿದ್ರತೆಯಿಂದಾಗಿ ಲೈಂಗಿಕ ಪ್ರಕ್ರಿಯೆಯ ನಂತರ ಸ್ವಲ್ಪಮಟ್ಟಿಗೆ ರಕ್ತಸ್ರಾವ ಆಗುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಾಶಯ ಮತ್ತು ಯೋನಿಯ ಪ್ರದೇಶಕ್ಕೆ ರಕ್ತ ಪೂರೈಕೆ ಹೆಚ್ಚಾಗುತ್ತದೆ ಮತ್ತು ಇದು ಸ್ವಲ್ಪ ರಕ್ತಸ್ರಾವಕ್ಕೆ ಕಾರಣವಾಗಬಹುದು, ಆದರೆ ರಕ್ತಸ್ರಾವವು ಋತುಚಕ್ರದಂತೆ ಆಗುತ್ತಿದ್ದರೆ ಮತ್ತು ಸೆಳೆತಗಳು ಹೊಂದಿದ್ದರೆ ದಯವಿಟ್ಟು ತಕ್ಷಣ ನಿಮ್ಮ ವೈದ್ಯರನ್ನು ನೋಡಿ.
ಕೆಲವೊಮ್ಮೆ ವೈದ್ಯರು ನಿಮಗೆ ಲೈಂಗಿಕ ಪ್ರಕ್ರಿಯೆಯಿಂದ ದೂರವಿರಲು ತಿಳಿಸುತ್ತಾರೆ, ವಿಶೇಷವಾಗಿ ನಿಮಗೆ ಪ್ಲಾಸೆಂಟಾ ಪ್ರಿವಿಯಾ ಇದ್ದಾಗ ಅಥವಾ ಈ ಮುಂಚೆ ಪ್ರಸವ-ಪೂರ್ವ ಡೆಲಿವರಿ ಆಗಿದ್ದರೆ ಮತ್ತು ಗರ್ಭಕಂಠ ಹಿಗ್ಗಿದ್ದರೆ ನೀವು ನಿಮ್ಮ ಮಗುವಿಗೆ ಸೋಂಕು ತಗುಲಿಸಬಹುದು. ಈ ನಿಯಮ ನಿಮ್ಮ ಪತಿಗೂ ಅನ್ವಯಿಸುತ್ತದೆ, ಏಕೆಂದರೆ, ಅವರು ನಿಮ್ಮೊಂದಿಗಿನ ಲೈಂಗಿಕ ಕ್ರಿಯೆಯಿಂದ ನಿಮ್ಮ ಮಗುವಿಗೆ ಸೋಂಕು ತಗುಲಿಸಬಹುದು.
ಆದ್ದರಿಂದ, ನಿಮ್ಮ ವೈದ್ಯರು ನೀವು ಎಚ್ಚರದಿಂದಿರಲು ಹೇಳಿದ್ದಲ್ಲಿ, ನೀವು ಯಾವುದೇ ಮೇಲಿನ ಪರಿಸ್ಥಿತಿಗಳು ಇದ್ದಲ್ಲಿ, ದಯವಿಟ್ಟು ಲೈಂಗಿಕತೆಯಿಂದ ದೂರವಿರಿ. ಗರ್ಭಾವಸ್ಥೆಯಲ್ಲಿ ಲೈಂಗಿಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಾಮಾನ್ಯವಾಗಿದೆ.