ಯಾವುದೇ ಆರೋಗ್ಯ ವಿಮೆ ಇಲ್ಲದಿರುವರು, ಈ ಮುಂದೆ ನಾವು ತಿಳಿಸಲು ಹೊರಟಿರುವ ಹಾಗೆ ಮಾಡಲು ಶಿಫಾರಸು ಮಾಡುತ್ತೇವೆ. ಪ್ರಧಾನ್ ಮಂತ್ರಿ ಸುರಿಕ್ಷಿತ್ ಮಾತೃತ್ವ ಅಭಿಯಾನ (PMSMA) ಮತ್ತು ಹೆರಿಗೆ ಲಾಭದ ಕಾರ್ಯಕ್ರಮ ಎಂದು ಕರೆಯಲಾಗುವ ಎರಡು ಪ್ರಸೂತಿಯ ಪ್ರಯೋಜನ ಕಾರ್ಯಕ್ರಮವನ್ನು ಪ್ರಧಾನ್ ಮಂತ್ರಿ ಮೋದಿಯವರು ಪ್ರಾರಂಭಿಸಿದ್ದಾರೆ.
ಹೆರಿಗೆ ಲಾಭದ ಕಾರ್ಯಕ್ರಮದಡಿಯಲ್ಲಿ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ತಮ್ಮ ಗರ್ಭಾವಸ್ಥೆಯ ನೋಂದಣಿಯ ನಂತರ, ಒಂದು ಪ್ರಸವಪೂರ್ವ ಪರೀಕ್ಷೆಯ ವೇಳೆ ಮತ್ತು ಮಗುವಿನ ಜನನ ಸಮಯದಲ್ಲಿ ಮೂರು ಕಂತುಗಳಲ್ಲಿ 5000 ರೂ ಗಳನ್ನೂ ಪಡೆಯಬಹುದಾಗಿದೆ.
ಪ್ರಧಾನ್ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನವನ್ನು ಭಾರತ ಸರ್ಕಾರದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (MoHFW) ಪ್ರಾರಂಭಿಸಿದೆ. ಈ ಕಾರ್ಯಕ್ರಮದಲ್ಲಿ ಪ್ರತಿ ತಿಂಗಳ 9 ನೇ ತಾರೀಕಿನಂದು ಎಲ್ಲಾ ಗರ್ಭಿಣಿ ಮಹಿಳೆಯರಿಗೆ ವಿಶ್ವಾಸಾರ್ಹ, ಸಮಗ್ರ ಮತ್ತು ಗುಣಮಟ್ಟದ ಪ್ರಸವಪೂರ್ವ ಆರೈಕೆಯನ್ನು, ಉಚಿತವಾಗಿ ನೀಡಬೇಕೆಂದು ಉದ್ದೇಶಿಸಿದೆ.
ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ, ಮನ್ ಕಿ ಬಾತ್ ನ 31 ನೇ ಜುಲೈ 2016 ಸಂಚಿಕೆಯಲ್ಲಿ ಪ್ರಧಾನ್ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನದ ಉದ್ದೇಶವನ್ನು ಒತ್ತಿ ಹೇಳಿದ್ದಾರೆ. PMSMA ಗೊತ್ತುಪಡಿಸಿದ ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ಗರ್ಭಾವಸ್ಥೆಯ 2ನೇ/3ನೇ ತ್ರೈಮಾಸಿಕದಲ್ಲಿ ಮಹಿಳೆಯರಿಗೆ ಪ್ರಸವಪೂರ್ವ ಆರೈಕೆ ಸೇವೆಗಳ ಕನಿಷ್ಠ ಪ್ಯಾಕೇಜ್ ನೀಡುವ ಬಗ್ಗೆ ಖಾತರಿಪಡಿಸುತ್ತದೆ.
ಈ ಅಭಿಯಾನ ಖಾಸಗಿ ಆಸ್ಪತ್ರೆಗಳ ಜೊತೆ ಸಂಯೋಗಕ್ಕಾಗಿ ಮತ್ತು ಖಾಸಗಿ ಸ್ವಯಂ ಸೇವಕರನ್ನು ಈ ಅಭಿಯಾನದಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಲು ಒಂದು ಕ್ರಮಬದ್ಧವಾದ ವಿಧಾನವನ್ನು ಅನುಸರಿಸುತ್ತದೆ; ಇದು ಜಾಗೃತಿ ಮೂಡಿಸುವ ತಂತ್ರಗಳು ಮತ್ತು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಖಾಸಗಿ ವಲಯಕ್ಕೆಈ ಅಭಿಯಾನದಲ್ಲಿ ಭಾಗವಹಿಸಲು ಮನವಿ ಮಾಡುವದನ್ನು ಒಳಗೊಂಡಿದೆ.
ಒಂದು ಅಂಕಿ-ಸಂಖ್ಯೆ ಮಾಹಿತಿ ಪ್ರಕಾರ 1990 ರಲ್ಲಿ ಜಾಗತಿಕ ಹೆರಿಗೆಯ ಮರಣ ಅನುಪಾತ (ಎಂಎಂಆರ್) 385 ಮಹಿಳೆಯರ ಮರಣ ಪ್ರತಿ 1 ಲಕ್ಷ ಮಹಿಳೆಯರಲ್ಲಿ ಆದರೆ ಭಾರತದಲ್ಲಿ ಹೆರಿಗೆಯ ಮರಣ ಅನುಪಾತ 1 ಲಕ್ಷ ಮಹಿಳೆಯರಲ್ಲಿ 556 ಮಹಿಳೆಯರ ಮರಣ ಮಗುವಿನ ಜನ್ಮದ ಸಮಯದಲ್ಲಿ ಆಗಿರುವುದನ್ನು ಬಹಿರಂಗಪಡಿಸುತ್ತದೆ. ಇದು ಈ ಪ್ರಮೇಯವನ್ನು ಆಧರಿಸಿದೆ - ಭಾರತದಲ್ಲಿ ಪ್ರತಿ ಗರ್ಭಿಣಿ ಮಹಿಳೆಯು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞ/ವಿಕಿರಣಶಾಸ್ತ್ರಜ್ಞ/ವೈದ್ಯರಿಂದ ಮತ್ತು ಒಮ್ಮೆ PMSMA ಅವಧಿಯಲ್ಲಿ ಸೂಕ್ತವಾಗಿ ಪರೀಕ್ಷೆಗೆ ಒಳಗೊಂಡರೆ ಈ ಪ್ರಕ್ರಿಯೆಯು ನಮ್ಮ ದೇಶದಲ್ಲಿ ತಾಯಿಯ ಮತ್ತು ನವಜಾತ ಶಿಶುಗಳ ಸಾವುಗಳ ಸಂಖ್ಯೆಯಲ್ಲಿನ ಕಡಿತಕ್ಕೆ ಕಾರಣವಾಗಬಹುದು.