ದ್ವಿತೀಯ ತ್ರೈಮಾಸಿಕದ ನಂತರ ಪ್ರತಿ ದಿನ ಒಮೇಗಾ-3 ಫ್ಯಾಟಿ ಆಸಿಡ್ ಮಾತ್ರೆಗಳನ್ನು ತಗೆದುಕೊಂಡ ಮಹಿಳೆಯರಿಗೆ 6 ವರ್ಷದವರೆಗೆ ಆರೋಗ್ಯಕರ ಮೂಳೆ ಮತ್ತು ಮಾಂಸಖಂಡಗಳ ಸಾಂದ್ರತೆ (BMI) ಹೊಂದಿದ ಮಕ್ಕಳು ಇದ್ದರು ಎಂದು ಡೆನ್ಮಾರ್ಕ್ ನ ಕೋಪನ್ಹೇಗನ್ ವಿಶ್ವವಿದ್ಯಾಲಯದ ಒಂದು ಸಂಶೋಧನೆ ತಿಳಿಸುತ್ತದೆ.
ತಮ್ಮ ಗರ್ಭಾವಸ್ಥೆಯಲ್ಲಿ ಆಲಿವ್-ಎಣ್ಣೆ-ಪ್ಲಸಿಬೊ ಮಾತ್ರೆಗಳನ್ನು ತಗೆದುಕೊಂಡ ತಾಯಿಯಂದಿರ ಮಕ್ಕಳನ್ನು ಮತ್ತು ಒಮೇಗಾ-3 ಫ್ಯಾಟಿ ಆಸಿಡ್ ಮಾತ್ರೆಗಳನ್ನು ತೆಗೆದುಕೊಂಡ ಮಹಿಳೆಯರ ಮಕ್ಕಳೊಂದಿಗೆ ಒಂದು ಕ್ಷ-ಕಿರಣ ಸ್ಕ್ಯಾನ್ ನ ಫಲಿತಾಂಶಕ್ಕೆ ಹೋಲಿಕೆ ಮಾಡಿ ನೋಡಿದಾಗ ಒಮೇಗಾ-3 ಫ್ಯಾಟಿ ಆಸಿಡ್ ಮಾತ್ರೆಗಳನ್ನು ತೆಗೆದುಕೊಂಡ ಮಹಿಳೆಯರ ಮಕ್ಕಳ ಮೂಳೆ ಮತ್ತು ಮಾಂಸಖಂಡಗಳ ಸಾಂದ್ರತೆಯು (BMI) ಹೆಚ್ಚು ಆರೋಗ್ಯಕರ ಆಗಿತ್ತು ಮತ್ತು ಇವರಲ್ಲಿ ತುಂಬಾ ಕಡಿಮೆ ಅನಾರೋಗ್ಯಕರ ಬೊಜ್ಜು ಕಂಡು ಬಂದಿತು.
ಈ ಸ್ಕ್ಯಾನ್ ಗಳು, ಒಮೇಗಾ-3 ಫ್ಯಾಟಿ ಆಸಿಡ್ ಮಾತ್ರೆಗಳು ಈ ಮಕ್ಕಳಲ್ಲಿ ಆಸ್ತಮಾ ಮತ್ತು ಇತರ ಉಸಿರಾಟದ ಸಂಬಂಧಿತ ಲಕ್ಷಣಗಳನ್ನು ಕಡಿಮೆಗೊಳಿಸುತ್ತವೆ ಎಂದು ಕೂಡ ತೋರಿಸಿಕೊಟ್ಟವು.
ಈ ಪೂರಕಗಳು ಬೆಳವಣಿಗೆಯನ್ನು ಉತ್ತೇಜಿಸುವ ಗುಣವನ್ನು ಹೊಂದಿದೆ ಎಂದು ಸಂಶೋಧನೆಯು ತೋರಿಸುತ್ತದೆ ಆದ್ದರಿಂದ ಎಲ್ಲಾ ತಾಯಂದಿರು ಜನ್ಮ ನೀಡುವ ಮೊದಲು ಈ ಪೂರಕವನ್ನು ಸೇವಿಸಲು ಉತ್ತೇಜಿಸುತ್ತದೆ.
ಒಮೇಗಾ-3 ಕೊಬ್ಬುಗಳು ಒಂದು ಉದ್ದ-ಸರಪಳಿಯ ಅಣುಗಳಾಗಿವೆ ಮತ್ತು ಇವು ಕಾಡ್ ಲಿವರ್ ಎಣ್ಣೆಯಲ್ಲಿ ಮತ್ತು ಈತರ ಪೂರಕಗಲ್ಲಿ ಹೇರಳವಾಗಿ ಸಿಗುತ್ತವೆ. ಒಮೇಗಾ-3 ಹೃದಯದ ಕಾಯಿಲೆಗಳ ವಿರುದ್ಧ ರಕ್ಷಣೆ, ಮಿದುಳಿನ ಶಕ್ತಿ ಮತ್ತು ಕೀಲು ಆರೋಗ್ಯ ವೃದ್ಧಿಗೆ ಉಪಯೋಗಕಾರಿಯಾಗಿದೆ.
ಅಗತ್ಯವಾದ ಈ ಕೊಬ್ಬುಗಳನ್ನು ನಮ್ಮ ದೇಹ ಉತ್ಪಾದಿಸುವದಿಲ್ಲ ಆದ್ದರಿಂದ ಇದನ್ನು ನಮ್ಮ ಆಹಾರಗಳಲ್ಲಿ ಸೇರಿಸಕೊಳ್ಳಬೇಕು.
ಇಂಪೀರಿಯಲ್ ಕಾಲೇಜ್ ಲಂಡನ್ ನ ವಿಶ್ಲೇಷಣೆಯು, ಗರ್ಭಾವಸ್ಥೆಯಲ್ಲಿ ಈ ಮಾತ್ರೆಗಳನ್ನು ತೆಗೆದುಕೊಂಡ ತಾಯಿಯಂದಿರ ಮಕ್ಕಳಲ್ಲಿ ಆಹಾರ ಅಲರ್ಜಿಯ ಸಾಧ್ಯತೆಗಳು ಕಡಿಮೆಯಾಗಿದೆ ಎಂದು ವಿವರಿಸುತ್ತದೆ.
ಒಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ಪ್ರಕಟಿಸಿದ ಇತ್ತೀಚಿನ ಸಂಶೋಧನೆಯು 736 ಡ್ಯಾನಿಷ್ ಮಹಿಳೆಯರು ಮತ್ತು ಅವರ ಮಕ್ಕಳನ್ನು ಒಳಗೊಂಡಿತ್ತು. ಅವರಿಗೆ ಯಾದೃಚ್ಛಿಕವಾಗಿ ಒಮೇಗಾ-3 ಮಾತ್ರೆಗಳು ಅಥವಾ ನಕಲಿ ನಿಯಂತ್ರಣ ಮಾತ್ರೆಗಳನ್ನು (dummy control pill) ಗರ್ಭಾವಸ್ಥೆಯ 24 ನೇ ವಾರದಿಂದ ಹಿಡಿದು ತಮ್ಮ ಮಗುವಿನ ಜನನದ 1 ವಾರದವರೆಗೆ ತೆಗೆದುಕೊಳ್ಳಲು ತಿಳಿಸಿತು.
ಈ ಅಧ್ಯಯನದ ಮೊದಲ ಗುರಿ ಮೀನಿನ-ಎಣ್ಣೆ-ಪೂರಕಗಳನ್ನು ತೆಗೆದುಕೊಳ್ಳುವ ಮಹಿಳೆಯರಲ್ಲಿ ಆಸ್ತಮಾ ದರದ ನಿಯಂತ್ರಣದ ಮಟ್ಟವನ್ನು ತಿಳಿದುಕೊಳ್ಳುವದಾಗಿತ್ತು ಮತ್ತು 30% ರಷ್ಟು ಆಸ್ತಮಾ ರೋಗದ ನಿಯಂತ್ರಣ ಆಗಿರುವದನ್ನು ಈ ಅಧ್ಯಯನ ಕಂಡುಕೊಂಡಿತು. ಈ ಅಧ್ಯನಯದ ಎರಡನೇ ಹಂತವಾಗಿ ಮಕ್ಕಳ ಎತ್ತರ ಮತ್ತು ತೂಕದ ಮೇಲೆ ಪ್ರತಿವರ್ಷ ನಿಗಾ ಇಡುವುದಾಗಿತ್ತು ಮತ್ತು 3.5 ಮತ್ತು 6 ವರ್ಷಕೊಮ್ಮೆ ಕ್ಷ-ಕಿರಣ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿತ್ತು.